ADVERTISEMENT

ಉತ್ತರ ಕನ್ನಡ: ಜಿಲ್ಲೆಗೆ 38 ತಜ್ಞ ವೈದ್ಯರ ನೇಮಕ

ವಿವಿಧ ತಾಲ್ಲೂಕು ಆಸ್ಪತ್ರೆಗಳಿಗೆ ನಿಯೋಜಿಸಿ ಸರ್ಕಾರದ ಆದೇಶ

​ಪ್ರಜಾವಾಣಿ ವಾರ್ತೆ
Published 29 ಮೇ 2021, 15:21 IST
Last Updated 29 ಮೇ 2021, 15:21 IST

ಕಾರವಾರ: ಜಿಲ್ಲೆಗೆ 38 ತಜ್ಞ ವೈದ್ಯರನ್ನು ನೇಮಕ ಮಾಡಿ ರಾಜ್ಯ ಸರ್ಕಾರವು ಆದೇಶಿಸಿದೆ. ಈ ಮೂಲಕ ಜಿಲ್ಲೆಯ ಆರೋಗ್ಯ ಕ್ಷೇತ್ರದಲ್ಲಿ ಹಲವು ವರ್ಷಗಳಿಂದ ಬಾಕಿಯಿದ್ದ ಸಮಸ್ಯೆ, ಪರಿಹಾರ ಕಾಣುವ ಸಾಧ್ಯತೆಯಿದೆ.

ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಮನವರಿಕೆ ಮಾಡಿದ್ದರು. ಇದಕ್ಕೆ ಇಬ್ಬರು ಸ್ಪಂದಿಸಿದ್ದಾರೆ.

ಎಂಟು ಅಸನ್ತೇಶಿಯಾ ತಜ್ಞರು: ಕಾರವಾರ ಜಿಲ್ಲಾ ಆಸ್ಪತ್ರೆ, ಮುಂಡಗೋಡ (ಎನ್.ಎಚ್.ಎಂ), ಹಳಿಯಾಳ, ಯಲ್ಲಾಪುರ, ದಾಂಡೇಲಿ, ಭಟ್ಕಳ ಸರ್ಕಾರಿ ಆಸ್ಪತ್ರೆಗಳು, ದಾಂಡೇಲಿ ಎಂ.ಸಿ.ಎಚ್ ಆಸ್ಪತ್ರೆ ಮತ್ತು ಪಾಳಾ ಸಮುದಾಯ ಆರೋಗ್ಯ ಕೇಂದ್ರಕ್ಕೆ ತಲಾ ಒಬ್ಬರು ನೇಮಕವಾಗಿದ್ದಾರೆ.

ADVERTISEMENT

ನಾಲ್ವರು ಚರ್ಮ ರೋಗ ತಜ್ಞರು: ಮುಂಡಗೋಡ, ಹಳಿಯಾಳ, ಅಂಕೋಲಾ ಮತ್ತು ಸಿದ್ದಾಪುರ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ ಒಬ್ಬರು ಚರ್ಮರೋಗ ತಜ್ಞರನ್ನು ನಿಯುಕ್ತಿಗೊಳಿಸಲಾಗಿದೆ.

ಆರು ಮಂದಿ ಜನರಲ್ ಮೆಡಿಸಿನ್ ವೈದ್ಯರು: ಯಲ್ಲಾಪುರ, ಅಂಕೋಲಾ, ಹಳಿಯಾಳ, ಕಾರವಾರ ಜಿಲ್ಲಾ ಆಸ್ಪತ್ರೆ, ದಾಂಡೇಲಿ ಮತ್ತು ಮುಂಡಗೋಡ ಸರ್ಕಾರಿ ಆಸ್ಪತ್ರೆಗಳಿಗೆ (ಎನ್.ಎಚ್.ಎಂ. ಗುತ್ತಿಗೆ) ತಲಾ ಒಬ್ಬರು ಜನರಲ್ ಮೆಡಿಸಿನ್ ವೈದ್ಯರ
ನೇಮಕವಾಗಿದೆ.

ನಾಲ್ವರು ಜನರಲ್ ಸರ್ಜರಿ: ಕಾರವಾರ ಜಿಲ್ಲಾ ಆಸ್ಪತ್ರೆಗೆ ಇಬ್ಬರು, ಜೊಯಿಡಾ ಮತ್ತು ಮುಂಡಗೋಡ ತಾಲ್ಲೂಕು ಆಸ್ಪತ್ರೆಗಳಿಗೆ ತಲಾ ಒಬ್ಬರು ಜನರಲ್ ಸರ್ಜರಿ ವೈದ್ಯರನ್ನು
ನೇಮಿಸಲಾಗಿದೆ.

ಏಳು ಮಂದಿ ಸ್ತ್ರೀರೋಗ ತಜ್ಞರು: ಜಿಲ್ಲಾ ಆಸ್ಪತ್ರೆಗೆ ಇಬ್ಬರು, ದಾಂಡೇಲಿ ಎಂ.ಸಿ.ಎಚ್ ಆಸ್ಪತ್ರೆ, ದಾಂಡೇಲಿ, ಮುಂಡಗೋಡ, ಅಂಕೋಲಾ ಮತ್ತು ಭಟ್ಕಳ ಸರ್ಕಾರಿ ಆಸ್ಪತ್ರೆಗೆ ತಲಾ ಒಬ್ಬರು ಸ್ತ್ರೀರೋಗ ತಜ್ಞರನ್ನು ಸರ್ಕಾರ ನೇಮಿಸಿದೆ.

ಆರು ಮಂದಿ ನೇತ್ರ ತಜ್ಞರು: ಭಟ್ಕಳ, ಹೊನ್ನಾವರ, ಕುಮಟಾ, ಅಂಕೋಲಾ, ಸಿದ್ದಾಪುರ ಮತ್ತು ಮುಂಡಗೋಡ ಸರ್ಕಾರಿ ಆಸ್ಪತ್ರೆಗಳಿಗೆ ಆರು ಮಂದಿ ನೇತ್ರ ತಜ್ಞರನ್ನೂ ಸರ್ಕಾರ
ನೀಡಿದೆ.

ಮಕ್ಕಳ ತಜ್ಞರು: ದಾಂಡೇಲಿಯ ಎಂ.ಸಿ.ಎಚ್ ಆಸ್ಪತ್ರೆ ಮತ್ತು ಯಲ್ಲಾಪುರ ಸರ್ಕಾರಿ ಆಸ್ಪತ್ರೆಗೆ ತಲಾ ಒಬ್ಬರು ಮಕ್ಕಳ ತಜ್ಞರನ್ನು ಹಾಗೂ ಮುಂಡಗೋಡ ಸರ್ಕಾರಿ ಆಸ್ಪತ್ರಗೆ ಇ.ಎನ್.ಟಿ ತಜ್ಞರನ್ನು ನೇಮಿಸಿ ಸರ್ಕಾರ ಆದೇಶಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.