ADVERTISEMENT

ಕಟ್ಟಿಗೆ ವಶ: ಗ್ರಾ.ಪಂ ಸದಸ್ಯ ಬಂಧನ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 16:32 IST
Last Updated 19 ಆಗಸ್ಟ್ 2022, 16:32 IST
ಹೊನ್ನಾವರ ತಾಲ್ಲೂಕಿನ ಹೆರಂಗಡಿ ಗ್ರಾಮ ವ್ಯಾಪ್ತಿಯ ಅರಣ್ಯದಲ್ಲಿ ಕಡಿಯಲಾದ ಮರದ ತುಂಡುಗಳನ್ನು ಗೇರುಸೊಪ್ಪ ವಲಯ ಅರಣ್ಯಾಧಿಕಾರಿ ಪ್ರೀತಿ ನಾಯ್ಕ ನೇತೃತ್ವದ ತಂಡ ವಶಪಡಿಸಿಕೊಂಡಿತು. ಪ್ರಕರಣದ ಆರೋಪಿ ಸುರೇಶ ನಾಯ್ಕ ಎಂಬಾತನನ್ನು ಬಂಧಿಸಲಾಗಿದೆ
ಹೊನ್ನಾವರ ತಾಲ್ಲೂಕಿನ ಹೆರಂಗಡಿ ಗ್ರಾಮ ವ್ಯಾಪ್ತಿಯ ಅರಣ್ಯದಲ್ಲಿ ಕಡಿಯಲಾದ ಮರದ ತುಂಡುಗಳನ್ನು ಗೇರುಸೊಪ್ಪ ವಲಯ ಅರಣ್ಯಾಧಿಕಾರಿ ಪ್ರೀತಿ ನಾಯ್ಕ ನೇತೃತ್ವದ ತಂಡ ವಶಪಡಿಸಿಕೊಂಡಿತು. ಪ್ರಕರಣದ ಆರೋಪಿ ಸುರೇಶ ನಾಯ್ಕ ಎಂಬಾತನನ್ನು ಬಂಧಿಸಲಾಗಿದೆ   

ಹೊನ್ನಾವರ: ಗೇರುಸೊಪ್ಪ ವಲಯ ಅರಣ್ಯಾಧಿಕಾರಿ ಪ್ರೀತಿ ನಾಯ್ಕ ನೇತೃತ್ವದ ಅರಣ್ಯ ಇಲಾಖೆಯ ಸಿಬ್ಬಂದಿ ತಂಡ ಕಾರ್ಯಾಚರಣೆ ನಡೆಸಿ ಹೆರಂಗಡಿ ಗ್ರಾಮದ ಮನೆಯೊಂದರಲ್ಲಿ ಬಚ್ಚಿಟ್ಟಿದ್ದ ಅಕ್ರಮ ನಾಟಾ ವಶಪಡಿಸಿಕೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೆರಂಗಡಿ ಗ್ರಾಮ ಪಂಚಾಯಿತಿ ಸದಸ್ಯ ಸುರೇಶ ಗಣಪತಿ ನಾಯ್ಕ ಎಂಬಾತನನ್ನು ಬಂಧಿಸಲಾಗಿದೆ.

ಗೇರುಸೊಪ್ಪ ವಲಯದ ಹೆರಂಗಡಿ ಶಾಖೆಯ ತುಂಬೆಬೀಳು ಅರಣ್ಯ ಸ.ನಂ.5ರಲ್ಲಿ ಕಡಿಯಲಾಗಿದ್ದ ನಂದಿ ಹಾಗೂ ಸಾಗವಾನಿ ಮರದ ತುಂಡುಗಳ ನಾಟಾ ತಯಾರಿಸಲಾಗಿತ್ತು. ಈ ಅಕ್ರಮ ನಾಟಾವನ್ನು ಆರೋಪಿ ಸುರೇಶ ನಾಯ್ಕ ಅವರ ಮನೆ,
ಕೊಟ್ಟಿಗೆಯಲ್ಲಿ ಬಚ್ಚಿಡಲಾಗಿತ್ತು.
ಅರಣ್ಯ ಸಿಬ್ಬಂದಿ ಸತತ ಎರಡು
ದಿನಗಳ ಕಾಲ ಕಾಯಾಚರಣೆ ನಡೆಸಿದರು. ಶೋಧ ಕಾರ್ಯ ಇನ್ನೂ ಮುಂದುವರಿದಿದೆ ಎಂದು ಪ್ರೀತಿ ನಾಯ್ಕ ತಿಳಿಸಿದರು. ಆರೋಪಿ ಸುರೇಶ ನಾಯ್ಕ ಅವರಿಗೆ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT