ADVERTISEMENT

ಬೇಳೂರು ಜಾತ್ರೆಯಲ್ಲಿ ಆಕರ್ಷಕ ‘ಹಗರಣ’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2022, 15:46 IST
Last Updated 2 ಡಿಸೆಂಬರ್ 2022, 15:46 IST
ವಾರ್ಷಿಕ ಜಾತ್ರೆ ಅಂಗವಾಗಿ ಕಾರವಾರ ತಾಲ್ಲೂಕಿನ ಬೇಳೂರಿನ ಬಿಂದು ಮಾಧವ ದೇವರ ವಿಗ್ರಹವನ್ನು ಅಲಂಕರಿಸಿರುವುದು
ವಾರ್ಷಿಕ ಜಾತ್ರೆ ಅಂಗವಾಗಿ ಕಾರವಾರ ತಾಲ್ಲೂಕಿನ ಬೇಳೂರಿನ ಬಿಂದು ಮಾಧವ ದೇವರ ವಿಗ್ರಹವನ್ನು ಅಲಂಕರಿಸಿರುವುದು   

ಕಾರವಾರ: ತಾಲ್ಲೂಕಿನ ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೇಳೂರಿನ ಬಿಂದು ಮಾಧವ ವಾರ್ಷಿಕ ಜಾತ್ರಾ ಮಹೋತ್ಸವು ಗುರುವಾರ ಹಾಗೂ ಶುಕ್ರವಾರ ಅದ್ಧೂರಿಯಾಗಿ ನೆರವೇರಿತು. ಜಾತ್ರೆಯ ಮೊದಲನೇ ದಿನದಂದು ದೇವರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆದವು.

ಪ್ರತಿವರ್ಷದಂತೆ ಈ ವರ್ಷವೂ ಗ್ರಾಮಸ್ಥರು ಜಾನಪದ ಮನರಂಜನೆ, ಅಣಕು ಪ್ರದರ್ಶನದ ‘ಹಗರಣ’ ಏರ್ಪಡಿಸಿದ್ದರು. ದಕ್ಷಿಣ ಕನ್ನಡ ಭಾಗದಲ್ಲಿ ಆರಾಧಿಸಲಾಗುವ ಪಂಜುರ್ಲಿ ದೈವದ ಬೃಹತ್ ಪ್ರತಿಕೃತಿ, ಚಿಂಪಾಂಜಿ, ಗೋರಿಲ್ಲಾ ಹಿಡಿದು ಬರುವ ಕಾಡಿನ ಜನರ ವೇಷ ಭೂಷಣ, ತೋಳ ಸೇರಿದಂತೆ ವಿವಿಧ ವೇಷಧಾರಿಗಳು ಗಮನ ಸೆಳೆದವು.

ದೇವಳಮಕ್ಕಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳ ಜಾತ್ರೆಗಳಲ್ಲಿ, ಅಲ್ಲಿನ ಹಾಲಕ್ಕಿ ಒಕ್ಕಲಿಗರ ಸಮುದಾಯದವರು ಪ್ರತಿ ವರ್ಷ ಇಂಥ ಅಣಕು ಪ್ರದರ್ಶನ ಹಮ್ಮಿಕೊಳ್ಳುತ್ತಾರೆ.

ADVERTISEMENT

ಬೇಳೂರಿನ ಜಾತ್ರೆಯ ಹಗರಣದ ಪ್ರದರ್ಶನಕ್ಕೆ ಸುಮಾರು ಒಂದು ತಿಂಗಳಿನಿಂದ ತಯಾರಿ ನಡೆಸಲಾಗುತ್ತದೆ. ಗ್ರಾಮಸ್ಥರೇ ಸ್ವಂತ ಹಣದಿಂದ ಬೇಕಾದ ಸಾಮಗ್ರಿ ಖರೀದಿಸುತ್ತಾರೆ. ಸಾವಿರಾರು ಮಂದಿ ಭಕ್ತರು ಭಾಗವಹಿಸಿ ಸಂಭ್ರಮಿಸುತ್ತಾರೆ ಎಂದು ಸ್ಥಳೀಯ ನಿವಾಸಿ ಪ್ರಜ್ವಲ್ ಬಾಬುರಾಯ ಶೇಟ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.