ಕಾರವಾರ: ಏಕಾಏಕಿ ಜನರೆಡೆಗೆ ನುಗ್ಗಿ ಬಂದ ದೈತ್ಯ ಕಾಡುಪ್ರಾಣಿ, ರಾತ್ರಿ ವೇಳೆಯಲ್ಲೂ ಹಾರಾಡುತ್ತ ಬಂದ ಹೆಲಿಕಾಪ್ಟರ್...ಇವೆಲ್ಲವೂ ಜನರನ್ನು ಆತಂಕಗೊಳಿಸುವ ಬದಲು ಖುಷಿಯಿಂದ ಕರತಾಡನ ಮಾಡುವಂತೆ ಮಾಡಿದವು.
ತಾಲ್ಲೂಕಿನ ತೊಡೂರು ಗ್ರಾಮದ ಗೋವಿಂದ ದೇವ ದೇವರ ವಾರ್ಷಿಕ ಜಾತ್ರೆ ಅಂಗವಾಗಿ ಗುರುವಾರ ರಾತ್ರಿ ಹಾಲಕ್ಕಿ ಹಗರಣ ಪ್ರದರ್ಶನ ನಡೆಯಿತು. ಗ್ರಾಮಸ್ಥರೇ ಸೇರಿಕೊಂಡು ರಚಿಸಿದ್ದ ಹಲವಾರು ಕಲಾಕೃತಿಗಳನ್ನು ಪ್ರದರ್ಶಿಸಲಾಯಿತು.
ಹೆಲಿಕಾಪ್ಟರ್‌ನಲ್ಲಿ ಬಂದ ಸೈನಿಕರು, ಜನರನ್ನು ಪೀಡಿಸುವ ಕಾಡುಪ್ರಾಣಿಗಳು, ನಡೆದಾಡುವ ಅಸ್ತಿಪಂಜರ, ಹೀಗೆ ಹಲವು ಬಗೆಯ ಕಲಾಕೃತಿಗಳ ಮೂಲಕ ಸದ್ಯದ ವ್ಯವಸ್ಥೆಯನ್ನು ಅಣಕಿಸುವ ಸಂದೇಶವನ್ನು ಯುವಕರು ನೀಡಿದರು. ಎರಡು ತಾಸಿಗೂ ಹೆಚ್ಚು ಕಾಲ ನಡೆದ ಹಗರಣ ವೀಕ್ಷಣೆಗೆ ವಿವಿಧೆಡೆಯಿಂದ ಬಂದಿದ್ದ ನೂರಾರು ಜನರು ಸೇರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.