ದಾಂಡೇಲಿ: ಹಳಿಯಾಳ ರಸ್ತೆಯ ಗಜಾನನ ಯುವಕ ಮಂಡಳಿ ವತಿಯಿಂದ ಮಾರುತಿ ಮಂದಿರದಲ್ಲಿ ಹನುಮ ಜಯಂತಿಯ ಪ್ರಯುಕ್ತ ತೊಟ್ಟಲೋತ್ಸವ, ವಿಶೇಷ ಅಲಂಕಾರ, ಮಹಾ ಮಂಗಳಾರತಿ ಮಹಾಪ್ರಸಾದ, ಭಜನೆ ಕಾರ್ಯಕ್ರಮಗಳು ನಡೆದವು.
ಮಧ್ಯಾಹ್ನ ಮಂಗಳಾರತಿ ನಂತರ ಮಹಾ ಪ್ರಸಾದ ಕಾರ್ಯಕ್ರಮ ನಡೆಯಿತು. ಸಂಜೆ ರಾಮ ಜಪ ಕಾರ್ಯಕ್ರಮ ನಡೆಯಿತು.
ವಿಶೇಷ ಪೂಜೆ ಅಲಂಕಾರ: ನಗರದ ಜೆ.ಎನ್.ರಸ್ತೆಯ ಮಾರುತಿ ಮಂದಿರದಲ್ಲಿ ಶನಿವಾರ ಬೆಳಗ್ಗೆ ಹೋಮ ಹವನ ಸೇರಿದಂತೆ ವಿಶೇಷ ಪೂಜೆ ಭಜನೆ ಕಾರ್ಯಕ್ರಮ ನಡೆಯಿತು. ಹನುಮ ಜಯಂತಿ ಪ್ರಯುಕ್ತ ಹನುಮ ದೇವರಿಗೆ ಮಾಡಿರುವ ವಿಶೇಷ ಅಲಂಕಾರ ಗಮನ ಸೆಳೆಯಿತು.
ನಗರದ ಚೌಧರಿ ಗೇಟ್, ಕುಳಗಿ ರಸ್ತೆ, ಕಾಳಿ ನದಿ ಹತ್ತಿರದ ಮಾರುತಿ ಮಂದಿರದಲ್ಲಿ ಬೆಳಗಿನಿಂದ ವಿಶೇಷ ಪೂಜೆ ಭಜನೆ ಕಾರ್ಯಕ್ರಮ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.