ಕಾರವಾರ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಶನಿವಾರ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯೊಂದಿಗೆ ಆಚರಿಸಲಾಯಿತು. ಹನುಮ ದೇವಾಲಯಗಳಲ್ಲಿ ವಿಶೆಷ ಪೂಜೆಗಳು ನಡೆದವು.
ಇಲ್ಲಿನ ಜೈಲ್ ಮಾರುತಿ ದೇವಾಲಯ, ಮಾರುತಿ ಗಲ್ಲಿಯ ಮಾರುತಿ ಮಂದಿರ, ಕಾಜುಬಾಗದ ಮಾರುತಿ ದೇವಾಲಯ ಸೇರಿದಂತೆ ವಿವಿಧೆಡೆಗಳಲ್ಲಿ ಅದ್ದೂರಿಯಾಗಿ ಆಚರಣೆ ನಡೆಯಿತು. ಟ್ಯಾಗೋರ್ ಕಡಲತೀರದ ಹನುಮಾನ್ ಮೂರ್ತಿಗೆ ನೂರಾರು ಭಕ್ತರು ಪೂಜೆ ಸಲ್ಲಿಸಿದರು.
ಹನುಮ ಜಯಂತಿ ಅಂಗವಾಗಿ ಹನುಮಾನ್ ಮೂರ್ತಿ ಎದುರಿನಿಂದ ಆರಂಭಿಸಿ ನಗರದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಲಾಯಿತು. ಕೇಸರಿ ಪೇಟ ತೊಟ್ಟು, ಕೈಯಲ್ಲಿ ಭಗವಾಧ್ವಜ ಹಿಡಿದು ನೂರಾರು ಜನರು ಮೆರವಣಿಗೆಯಲ್ಲಿ ಸಾಗಿದರು.
ಮಾರುತಿ ದೇವಾಲಯಗಳಲ್ಲಿ ಬಾಲ ಹನುಮನ ಮೂರ್ತಿಯನ್ನು ತೊಟ್ಟಿಲಿನಲ್ಲಿಟ್ಟು ತೂಗಿ ಭಕ್ತರು ಸಂಭ್ರಮಿಸಿದರು. ಭಕ್ತಾದಿಗಳಿಗೆ ಪಾನಕ, ಪ್ರಸಾದ ವಿತರಣೆ ನಡೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.