
ಪ್ರಜಾವಾಣಿ ವಾರ್ತೆ
ಶಿರಸಿ: ಹಿಮಾಲಯದಂಥ ತಂಪಾದ, ಎತ್ತರದ ಪರ್ವತ ಪ್ರದೇಶಗಳಲ್ಲಿ ಕಾಣಸಿಗುವ ಚಮರಿಮೃಗಗಳನ್ನು (ಯಾಕ್) ಶಿರಸಿಯ ಅನಾಥ ಪ್ರಾಣಿಗಳ ಆರೈಕೆ ಕೇಂದ್ರವಾದ ಪೆಟ್ ಪ್ಲಾನೆಟ್ ಕೇಂದ್ರದಲ್ಲಿ ಪೋಷಿಸಲಾಗುತ್ತಿದೆ.
'ಫೆಬ್ರುವರಿಯಲ್ಲಿ ಹಿಮಾಚಲ ಪ್ರದೇಶಕ್ಕೆ ತೆರಳಿದ್ದ ವೇಳೆ ಅಲ್ಲಿನ ಜನರಿಗೆ ಪೆಟ್ ಪ್ಲಾನೆಟ್ ಬಗ್ಗೆ ತಿಳಿಸಿದ್ದೆ. ಅಲ್ಲಿನ ನಿವಾಸಿಗಳು ಹಣದ ಬದಲು ಚಮರಿಮೃಗಗಳನ್ನು ಕೊಡುಗೆ ನೀಡುತ್ತೇವೆ. ಅವುಗಳನ್ನು ನೋಡಲು ಪ್ರವಾಸಿಗರಿಗೂ ಖುಷಿಯಾಗುತ್ತದೆ ಎಂದು ಮೂರು ಚಮರಿಮೃಗಗಳನ್ನು ವಾಹನದಲ್ಲಿ ಕಳುಹಿಸಿದ್ದು, ಎಲ್ಲವೂ ಆರೋಗ್ಯವಾಗಿವೆ. ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡಿವೆ’ ಎಂದು ಪ್ಲಾನೆಟ್‌ನ ಪ್ರಮುಖ ರಾಜೇಂದ್ರ ಶಿರ್ಸಿಕರ ಮಾಹಿತಿ ಹಂಚಿಕೊಂಡರು.
‘14 ವರ್ಷ ಮತ್ತು 10 ತಿಂಗಳ ಹೆಣ್ಣು ಮತ್ತು 2 ವರ್ಷದ ಒಂದು ಗಂಡು ಚಮರಿಮೃಗವಿದೆ. ಹಿಮಾಚಲದ ವಾತಾವರಣದ ಅನುಭವಕ್ಕಾಗಿ ಶೆಡ್ ಫ್ಯಾನ್ ಅಳವಡಿಸಲಾಗಿದೆ. ಪಶ್ಚಿಮಘಟ್ಟದ ವಾತಾವರಣಕ್ಕೆ ಬಹುತೇಕ ಎಲ್ಲ ಪ್ರಬೇಧಗಳ ಪ್ರಾಣಿಗಳು ಹೊಂದಿಕೊಳ್ಳುತ್ತವೆ’ ಎಂದರು.