ADVERTISEMENT

ಮಾರಿಕಾಂಬಾ ದೇಗುಲದಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸಿ: ಆಗ್ರಹ

ಹಿಂದೂ ಜನಜಾಗೃತಿ ಸಮಿತಿಯಿಂದ ಧರ್ಮದರ್ಶಿ ಮಂಡಳಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 12:44 IST
Last Updated 23 ನವೆಂಬರ್ 2022, 12:44 IST
ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಭೆಟಿ ನೀಡುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು ಬುಧವಾರ ದೇವಾಲಯದ ಧರ್ಮದರ್ಶಿ ಮಂಡಳದ ಸದಸ್ಯ ಸುಧೀರ ಹಂದ್ರಾಳ ಅವರಿಗೆ ಮನವಿ ಸಲ್ಲಿಸಿದರು.
ಶಿರಸಿಯ ಮಾರಿಕಾಂಬಾ ದೇವಾಲಯಕ್ಕೆ ಭೆಟಿ ನೀಡುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು ಬುಧವಾರ ದೇವಾಲಯದ ಧರ್ಮದರ್ಶಿ ಮಂಡಳದ ಸದಸ್ಯ ಸುಧೀರ ಹಂದ್ರಾಳ ಅವರಿಗೆ ಮನವಿ ಸಲ್ಲಿಸಿದರು.   

ಶಿರಸಿ: ಇಲ್ಲಿನ ಮಾರಿಕಾಂಬಾ ದೇವಾಲಯಕ್ಕೆ ಭೆಟಿ ನೀಡುವ ಭಕ್ತರಿಗೆ ವಸ್ತ್ರ ಸಂಹಿತೆ ಜಾರಿಗೊಳಿಸಲು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ನೇತೃತ್ವದಲ್ಲಿ ವಿವಿಧ ಹಿಂದೂಪರ ಸಂಘಟನೆಗಳ ಪ್ರಮುಖರು ಬುಧವಾರ ದೇವಾಲಯದ ಧರ್ಮದರ್ಶಿ ಮಂಡಳಕ್ಕೆ ಮನವಿ ಸಲ್ಲಿಸಿದರು.

‘ದೇವಿಯ ದರ್ಶನಕ್ಕೆ ಬರುವ ಭಕ್ತರು ದೇವಾಲಯಕ್ಕೆ ಪ್ರವೇಶಿಸುವಾಗ ಸಾತ್ವಿಕ ಉಡುಪುಗಳನ್ನು ಮಾತ್ರ ಧರಿಸುವ ನಿಯಮ ಜಾರಿಗೊಳಿಸಬೇಕು’ ಎಂದು ಸಲ್ಲಿಸಲಾದ ಮನವಿಯನ್ನು ಧರ್ಮದರ್ಶಿ ಮಂಡಳದ ಸದಸ್ಯ ಸುಧೀರ ಹಂದ್ರಾಳ ಸ್ವೀಕರಿಸಿದರು.

‘ಪುರುಷರಿಗೆ ಧೋತಿ, ಪೈಜಾಮ, ಸಾಮಾನ್ಯ ಅಂಗಿ ಹಾಗೂ ಮಹಿಳೆಯರಿಗೆ ಸೀರೆ, ಚೂಡಿದಾರ, ಲಂಗಾ–ದಾವಣಿ ಧರಿಸಿದ್ದರೆ ಮಾತ್ರ ಪ್ರವೇಶ ಕಲ್ಪಿಸಬೇಕು. ಚರ್ಮದ ಉತ್ಪನ್ನಗಳನ್ನು ಧರಿಸಿ ದೇವಾಲಯದ ಒಳಗೆ ಪ್ರವೇಶಿಸುವುದನ್ನು ತಡೆಯಬೇಕು. ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಜತೆಗೆ, ದೇವಾಲಯದ ಆವರಣದಲ್ಲಿ ಫಲಕ ಅಳವಡಿಸಬೇಕು’ ಎಂದು ಹಿಂದೂ ಜನಜಾಗೃತಿ ಸಮಿತಿಯ ಜಿಲ್ಲಾ ಸಮನ್ವಯಕ ಶರತಕುಮಾರ್ ನಾಯ್ಕ ಒತ್ತಾಯಿಸಿದರು.

ADVERTISEMENT

‘ಹಿಂದೂ ಸಂಸ್ಕೃತಿಯ ಪ್ರಕಾರ ಧಾರ್ಮಿಕ ತಾಣಗಳಿಗೆ ಭೇಟಿ ನೀಡುವಾಗ ಸಾತ್ವಿಕ ಉಡುಪು ಧರಿಸಿ ತೆರಳುವುದು ಉತ್ತಮ. ಆದರೆ, ಈಚೆಗೆ ಪಾಧ್ಚಿಮಾತ್ರ ಶೈಲಿಯ ಉಡುಪು ಧರಿಸಿ ದೇವಾಲಯಕ್ಕೆ ಭೇಟಿ ನೀಡುವವರ ಸಂಖ್ಯೆಯೂ ಹೆಚ್ಚುತ್ತಿದೆ. ಇದಕ್ಕೆ ಅವಕಾಶ ಮಾಡಿಕೊಡಬಾರದು’ ಎಂದು ಆಗ್ರಹಿಸಿದರು.

ನಗರಸಭೆ ಉಪಾಧ್ಯಕ್ಷೆ ವೀಣಾ ಶೆಟ್ಟಿ, ಹಿಂದೂ ಜಾಗರಣ ವೇದಿಕೆಯ ಪ್ರಮುಖ ಗೋಪಾಲ ದೇವಾಡಿಗ, ಭಜರಂಗದಳದ ಜಿಲ್ಲಾ ಘಟಕದ ಸಂಚಾಲಕ ವಿಠ್ಠಲ ಪೈ, ಪ್ರಮುಖರಾದ ಸತೀಶ ನಾಯ್ಕ, ಮಾರುತಿ ಬೊಂಗಾಳೆ, ಸವಿತಾ ಹೆಗಡೆ, ಸಚ್ಚಿದಾನಂದ ಹೆಗಡೆ, ಪ್ರದೀಪ ನಾಯ್ಕ, ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.