ADVERTISEMENT

ಹೊನ್ನಾವರ | ಹಸು ಕಳವು: ಆರೋಪಿಗಳ ಬಂಧನ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2025, 6:54 IST
Last Updated 13 ಸೆಪ್ಟೆಂಬರ್ 2025, 6:54 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಹೊನ್ನಾವರ: ಹಸುವೊಂದನ್ನು ಕಳವು ಮಾಡಿ ಕಾರಿನಲ್ಲಿ ಸಾಗಣೆ ಮಾಡಲು ಯತ್ನಿಸಿದ ಇಬ್ಬರು ಆರೋಪಿಗಳನ್ನು ಇಲ್ಲಿನ ಪೊಲೀಸ್ ತಂಡ ಬಂಧಿಸಿದೆ.

ADVERTISEMENT

ಭಟ್ಕಳ ಮುಗ್ದಂ ಕೊಲೊನಿಯ ಮೊಹಮ್ಮದ್ ಜಾಫರ್ ಸಾಧಿಕ್ ಜಕ್ವಾನ್ ಮೊಹಮ್ಮದ್ ಅಲಿ ಹಾಗೂ ಕುಂದಾಪುರ ಜುಮ್ಮಾ ಮಸೀದಿ ರಸ್ತೆ ನಿವಾಸಿ ಸಬೀಲ್ ಬೆಟ್ಟೆ ಹುಸೇನ್ ಸಾಹೆಬ್ ಬಂಧಿತ ಆರೋಪಿಗಳು.

ಮಾಸ್ಕ್ ಧರಿಸಿದ್ದ ಆರೋಪಿಗಳು ಸೆ.4ರಂದು ರಾತ್ರಿ ತಾಲ್ಲೂಕಿನ ರಸ್ತೆಯೊಂದರ ಪಕ್ಕ ಮಲಗಿದ್ದ ಹಸುವೊಂದನ್ನು ಕಳವು ಮಾಡಲು ಪ್ರಯತ್ನಿಸಿದರು ಎಂದು ಸಿಪಿಐ ಸಿದ್ಧರಾಮೇಶ್ವರ ಠಾಣೆಗೆ ನೀಡಿದ್ದ ದೂರಿನನ್ವಯ ಪೊಲೀಸ್ ತಂಡ ರಚಿಸಿ ಆರೋಪಿಗಳ ಪತ್ತೆಗೆ ಕಾರ್ಯಾಚರಣೆ ನಡೆಸಲಾಗಿತ್ತು.

ಘಟನೆಗೆ ಸಂಬಂಧಿಸಿದ ಇನ್ನಿಬ್ಬರು ಆರೋಪಿಗಳು ನಾಪತ್ತೆಯಾಗಿದ್ದಾರೆ. ಬಂಧಿತರಿಂದ ಬ್ರಿಜಾ ಕಾರ್ ವಶಪಡಿಸಿಕೊಳ್ಳಲಾಗಿದೆ ಎಂದು ಇಲ್ಲಿನ ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.