ಸಿದ್ದಾಪುರ : ಜೇನು ನೊಣಗಳ ದಾಳಿಯಿಂದ ತಾಲ್ಲೂಕಿನ ಹಂಜಿಗಿಯ ಮಹಾಲಕ್ಷ್ಮೀ ರಾಮಚಂದ್ರ ಮಡಿವಾಳ (47) ಎಂಬುವರು ಭಾನುವಾರ ಮೃತಪಟ್ಟಿದ್ದಾರೆ.
ಈಕೆ ತನ್ನ ಗಂಡ ಹಾಗೂ ಮಗನೊಂದಿಗೆ ಅಕ್ಕುಂಜಿ ಗ್ರಾಮದ ವ್ಯಾಪ್ತಿಯಲ್ಲಿರುವ ತಮ್ಮ ಗದ್ದೆಗೆ ಭತ್ತದ ಹೊರೆ ಕಟ್ಟಲು ಹೋಗಿದ್ದು, ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದಾಗ ಜೇನು ನೊಣಗಳ ಗುಂಪು ದಾಳಿ ಮಾಡಿದ್ದವು. ಆಗ ಮೂವರೂ ದಿಕ್ಕಾಪಾಲಾಗಿ ಓಡಿದರು. ನಂತರ
ಗದ್ದೆಯ ಸಮೀಪದ ಬೇಣದಲ್ಲಿ ಆಕೆಯ ಶವ ಸಿಕ್ಕಿದೆ. ಸ್ಥಳೀಯ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.