ಹೊನ್ನಾವರ: ತಾಲ್ಲೂಕಿನ ಜಲವಳ್ಳಿ ಗ್ರಾಮದ ಅರಣ್ಯವನ್ನು ಸೋಮವಾರ ಅಕ್ರಮವಾಗಿ ಪ್ರವೇಶಿಸಿ ಎರಡು ಕಾಡುಹಂದಿಗಳನ್ನು ಬೇಟೆಯಾಡಿ ಅದರ ಮಾಂಸ ಸಾಗಣೆ ಮಾಡಿದ ಆರೋಪದ ಮೇಲೆ ಹೊನ್ನಾವರ ಅರಣ್ಯ ವಲಯದ ಸಿಬ್ಬಂದಿ ತಂಡ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಆರೋಪಿಗಳು ಕಳ್ಳ ಸಾಗಣೆ ಮಾಡುತ್ತಿದ್ದ 45 ಕೆ.ಜಿ. ಕಾಡುಹಂದಿ ಮಾಂಸ ಹಾಗೂ ಹತ್ಯೆ ಮಾಡಿದ ಕಾಡು ಹಂದಿಗಳ ವಿವಿಧ ಅಂಗಾಂಗಗಳ ಜೊತೆ ಸಾಗಣೆ ಮಾಡುತ್ತಿದ್ದ ವಾಹನವನ್ನು ಜಪ್ತಿ ಪಡೆಸಿಕೊಂಡಿದ್ದಾರೆ.
ಮೂಡ್ಕಣಿ ಗ್ರಾಮದ ಥಾಮಸ್ ಡಿಯೋಗ ಡಯಾಸ್ ಹಾಗೂ ಸಂತ ಡಿಯೋಗ ಡಯಾಸ್ ಬಂಧಿತರು. ಉಪಅರಣ್ಯ ಸಂರಕ್ಷಣಾಧಿಕಾರಿ ಯೋಗೀಶ ಸಿಕೆ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಲೋಹಿತ್ ಅವರ ನಿರ್ದೇಶನದಂತೆ ವಲಯ ಅರಣ್ಯಾಧಿಕಾರಿ ಸವಿತಾ ದೇವಾಡಿಗ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಸಹಾಯಕ ವಲಯ ಅರಣ್ಯಾಧಿಕಾರಿ ವಿಶಾಲ ಡಿ.ಡಿ., ಸಂತೋಷ ನಾಯ್ಕ ಹಾಗೂ ಇತರ ಸಿಬ್ಬಂದಿ ತಂಡದಲ್ಲಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.