ADVERTISEMENT

ಮುಂಡಗೋಡ: ಅನುಮತಿ ಪಡೆಯದ ಕ್ಲಿನಿಕ್‌ಗೆ ಬೀಗ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2025, 3:56 IST
Last Updated 18 ಸೆಪ್ಟೆಂಬರ್ 2025, 3:56 IST
ಮುಂಡಗೋಡ ತಾಲ್ಲೂಕಿನ ಕಾತೂರ ಗ್ರಾಮದಲ್ಲಿ ಕೆಪಿಎಂಇ ಕಾಯ್ದೆಯಡಿ ನೋಂದಣಿ ಆಗದ ಕ್ಲಿನಿಕ್‌ನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನೀರಜ ಬಿ.ವಿ ನೇತೃತ್ವದ ತಂಡ ಬಂದ್‌ ಮಾಡಿಸಿತು
ಮುಂಡಗೋಡ ತಾಲ್ಲೂಕಿನ ಕಾತೂರ ಗ್ರಾಮದಲ್ಲಿ ಕೆಪಿಎಂಇ ಕಾಯ್ದೆಯಡಿ ನೋಂದಣಿ ಆಗದ ಕ್ಲಿನಿಕ್‌ನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನೀರಜ ಬಿ.ವಿ ನೇತೃತ್ವದ ತಂಡ ಬಂದ್‌ ಮಾಡಿಸಿತು   

ಮುಂಡಗೋಡ: ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆಯಡಿ (ಕೆಪಿಎಂಇ) ನೋಂದಣಿ ಇಲ್ಲದೇ, ಅನಧಿಕೃತವಾಗಿ ಕ್ಲಿನಿಕ್‌ ನಡೆಸುತ್ತಿದ್ದ  ತಾಲ್ಲೂಕಿನ ಕಾತೂರ ಗ್ರಾಮದ ಕ್ಲಿನಿಕ್‌ವೊಂದರ ಮೇಲೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ನೀರಜ ಬಿ.ವಿ ನೇತೃತ್ವದ ತಂಡ ಬುಧವಾರ ದಾಳಿ ಮಾಡಿ, ಕ್ಲಿನಿಕ್‌ಗೆ ಬೀಗ ಹಾಕಿತು.

‘ಅನಧಿಕೃತವಾಗಿ ಕ್ಲಿನಿಕ್‌ ನಡೆಸುತ್ತಿದ್ದಾರೆ ಎಂಬ ಆರೋಪ ಹಿಂದೆಯೂ ಕೇಳಿಬಂದಿತ್ತು. ಆಗ, ದಾಳಿ ಮಾಡಿದ ವೇಳೆ, ಯಾವುದೇ ಅನುಮತಿ ಪಡೆಯದೇ ಕ್ಲಿನಿಕ್‌ ನಡೆಸುತ್ತಿರುವುದು ಕಂಡುಬಂದಿತ್ತು. ಅನುಮತಿ ಪಡೆಯದೇ ಕ್ಲಿನಿಕ್‌ ನಡೆಸುವುದಿಲ್ಲ ಎಂದು ರತ್ನಮ್ಮ ಎಂಬುವರು ಮುಚ್ಚಳಿಕೆ ಬರೆದುಕೊಟ್ಟಿದ್ದರು. ಕೆಲ ದಿನಗಳ ನಂತರ ಮತ್ತೆ ಕ್ಲಿನಿಕ್‌ ಆರಂಭಿಸಿದ್ದಾರೆ ಎಂದು ಸಾರ್ವಜನಿಕರು ದೂರಿದ್ದರಿಂದ, ಈ ದಾಳಿ ನಡೆಸಲಾಗಿದೆ. ಸದ್ಯ ಕ್ಲಿನಿಕ್‌ ಬಂದ್‌ ಮಾಡಿಸಲಾಗಿದ್ದು, ವಿಚಾರಣೆ ನಂತರ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ನರೇಂದ್ರ ಪವಾರ ಹೇಳಿದರು.

ಆಡಳಿತ ವೈದ್ಯಾಧಿಕಾರಿ ಡಾ.ಭರತ ಡಿ.ಟಿ. ಇದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.