
ಪ್ರಜಾವಾಣಿ ವಾರ್ತೆ
ಪೊಲೀಸ್
ಸಾಂದರ್ಭಿಕ ಚಿತ್ರ
ಭಟ್ಕಳ: ತಾಲ್ಲೂಕಿನ ಮುಂಡಳ್ಳಿ ಗ್ರಾಮದ ಸರ್ವೇ ನಂ. 207ರಲ್ಲಿ ಪರವಾನಗಿಯಿಲ್ಲದೆ ಅಕ್ರಮವಾಗಿ ಚೀರೆಕಲ್ಲು ಗಣಿಗಾರಿಕೆ ನಡಸುತ್ತಿದ್ದ ವೇಳೆ ದಾಳಿ ನಡೆಸಿದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಮೂವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ತಾಲ್ಲೂಕಿನ ಬೆಣಂದೂರು ನಿವಾಸಿ ಪರಮೇಶ್ವರ ಜಟ್ಟ ನಾಯ್ಕ(40), ಮುಂಡಳ್ಳಿ ಚೌಥನಿ ನಿವಾಸಿ ಚಂದ್ರು ನಾರಾಯಣ ನಾಯ್ಕ(48) ಹಾಗೂ ಹಡೀನ್ ಬೆಳಕೆ ನಿವಾಸಿ ರಘು ನಾರಾಯಣ ನಾಯ್ಕ (38) ಆರೋಪಿಗಳು. ದಾಳಿ ವೇಳೆ ಗಣಿಗಾರಿಕೆಗೆ ಬಳಸಿದ ಎರಡು ಟಿಲ್ಲರ್ ಎಂಜಿನ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಅಕ್ರಮ ಚಿರಕಲ್ಲು ಗಣಿಗಾರಿಕೆಯಿಂದ ಸರ್ಕಾರದ ಬೊಕ್ಕಸಕ್ಕೆ ₹3.71 ಲಕ್ಷ ನಷ್ಟ ಉಂಟಾಗಿದೆ ಎಂದೂ ದೂರಿನಲ್ಲಿ ದಾಖಲಿಸಲಾಗಿದೆ.
ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.