ADVERTISEMENT

ಸ್ವಾಭಿಮಾನ ರಾಷ್ಟ್ರದ ಸಂದೇಶ ಜಗತ್ತಿಗೆ ತಿಳಿಯಲಿ: ಆಕೃತಿ

​ಪ್ರಜಾವಾಣಿ ವಾರ್ತೆ
Published 15 ಆಗಸ್ಟ್ 2021, 13:15 IST
Last Updated 15 ಆಗಸ್ಟ್ 2021, 13:15 IST
ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ಶಿರಸಿಯ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.   

ಶಿರಸಿ: ಶಾಂತಿ, ಸಹನೆಯ ಜೀವನ ಪದ್ಧತಿ ಜಗತ್ತಿಗೆ ಹೇಳಿಕೊಟ್ಟ ಭಾರತ ಇಂದು ಪ್ರಬಲವಾಗುತ್ತಿದ್ದು, ಶಕ್ತಿಶಾಲಿ ಸ್ವಾಭಿಮಾನಿ ರಾಷ್ಟ್ರ ಎಂಬ ಸಂದೇಶ ಜಗತ್ತಿಗೆ ತಿಳಿಯಬೇಕು ಎಂದು ಉಪ ವಿಭಾಗಾಧಿಕಾರಿ ಆಕೃತಿ ಬನ್ಸಾಲ್ ಹೇಳಿದರು.

ಮಾರಿಕಾಂಬಾ ಕ್ರೀಡಾಂಗಣದಲ್ಲಿ 75ನೆ ಸ್ವಾತಂತ್ರ್ಯೋತ್ಸವ ದಿನದ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಅವರು, ‘ಸ್ವಾತಂತ್ರ್ಯಕ್ಕೆ ಹಲವರು ಜೀವನ ತ್ಯಾಗ ಮಾಡಿದ್ದರು. ತ್ಯಾಗಗುಣದ ಹೋರಾಟದಿಂದ ದೊರೆತ ಸ್ವಾತಂತ್ರ್ಯಕ್ಕೆ ಅರ್ಥ ನೀಡಬೇಕು. ಬೇರೆಯವರ ವಿಚಾರ, ಚಿಂತನೆ ಗೌರವಿಸುವ ಗುಣ ಬೆಳೆಯಬೇಕು’ ಎಂದರು.

ಜೀವ ವೈವಿಧ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ನಗರಸಭೆ ಅಧ್ಯಕ್ಷ ಗಣಪತಿ ನಾಯ್ಕ, ಉಪಾಧ್ಯಕ್ಷೆ ವೀಣಾ ಶೆಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ನಂದನ ಸಾಗರ್, ತಹಶೀಲ್ದಾರ್ ಎಂ.ಆರ್.ಕುಲಕರ್ಣಿ, ತಾಲ್ಲೂಕು ಪಂಚಾಯ್ತಿ ಇಓ ಎಫ್.ಜಿ.ಚೆನ್ನಣ್ಣನವರ್, ಡಿಡಿಪಿಐ ದಿವಾಕರ ಶೆಟ್ಟಿ, ಸಪಿಐ ರಾಮಚಂದ್ರ ನಾಯಕ ಇದ್ದರು.

ADVERTISEMENT

ಸನ್ಮಾನ:ಪೌರ ಕಾರ್ಮಿಕ ಅಣ್ಣಪ್ಪ ಶಂಕರ ರಾಜ್, ಶಿರಸಿ ಗ್ರಾಮೀಣ ಠಾಣೆಯ ಚೇತನ ಕುಮಾರ್ ಎ., ಯೋಗ ಶಿಕ್ಷಕಿ ಮಂಗಳಗೌರಿ ಭಟ್ಟ, ಅಂಗನವಾಡಿ ಕಾರ್ಯಕರ್ತೆ ಅರುಣಾ ಶ್ರೀಧರ ಭಟ್, ಪಂಡಿತ ಸಾರ್ವಜನಿಕ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಗಜಾನನ ಭಟ್ ಅವರನ್ನು ಸನ್ಮಾನಿಸಲಾಯಿತು.

ವಿವಿಧೆಡೆ ಸ್ವಾತಂತ್ರ್ಯೋತ್ಸವ:ಸ್ವಾತಂತ್ರ್ಯದ ಅಮೃತ ಮಹೋತ್ಸವವನ್ನು ತಾಲ್ಲೂಕಿನ ವಿವಿಧೆಡೆ ಶಾಲೆ, ಕಾಲೇಜು, ಸರ್ಕಾರಿ ಕಚೇರಿಗಳಲ್ಲಿ ಸಂಭ್ರಮದಿಂದ ನಡೆಸಲಾಯಿತು. ಕೋವಿಡ್ ಸುರಕ್ಷತೆ ಕ್ರಮ ಅನುಸರಿಸಿ ಕಾರ್ಯಕ್ರಮ ಆಯೋಜನೆಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.