ADVERTISEMENT

ಶಿರಸಿ: ಪಶು ವಿಮೆ ಪರಿಹಾರಧನ ವಿತರಣೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2021, 17:16 IST
Last Updated 2 ಅಕ್ಟೋಬರ್ 2021, 17:16 IST
ಆಕಳು ಅಕಾಲಿಕವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅವುಗಳ ಮಾಲೀಕರಿಗೆ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಶಿರಸಿಯ ಕೆಎಂಎಫ್ ಕಚೇರಿಯಲ್ಲಿ ವಿಮೆ ಪರಿಹಾರಧನದ ಚೆಕ್ ವಿತರಿಸಿದರು
ಆಕಳು ಅಕಾಲಿಕವಾಗಿ ಮೃತಪಟ್ಟ ಹಿನ್ನೆಲೆಯಲ್ಲಿ ಅವುಗಳ ಮಾಲೀಕರಿಗೆ ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಶಿರಸಿಯ ಕೆಎಂಎಫ್ ಕಚೇರಿಯಲ್ಲಿ ವಿಮೆ ಪರಿಹಾರಧನದ ಚೆಕ್ ವಿತರಿಸಿದರು   

ಶಿರಸಿ: ಅಕಾಲಿಕವಾಗಿ ನಿಧನ ಹೊಂದಿದ ಆಕಳುಗಳಿಗೆ ವಿಮಾ ಪರಿಹಾರ ಮೊತ್ತದ ಚೆಕ್‍ನ್ನು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಈಚೆಗೆ ವಿತರಿಸಿದರು.

ವಾದಿರಾಜಮಠಕ್ಕೆ ಸೇರಿದ ಆಕಳು ಮೃತಪಟ್ಟಿದ್ದ ಹಿನ್ನೆಲೆಯಲ್ಲಿ ಮಠಕ್ಕೆ ₹33 ಸಾವಿರ ಮೊತ್ತದ ವಿಮಾ ಮೊತ್ತದ ಚೆಕ್ ವಿತರಿಸಲಾಯಿತು.ಭೈರುಂಬೆ ಹಾಲು ಉತ್ಪಾದಕರ ಸಹಕಾರಿ ಸಂಘದ ರಾಜೇಶ್ವರಿ ಹೆಗಡೆ ಅವರಿಗೆ ₹39 ಸಾವಿರ, ಚಿಕ್ಕ ಬೆಂಗಳೆ ಹಾಲು ಉತ್ಪಾದಕರ ಸಹಕಾರಿ ಸಂಘದ ಕಲ್ಪನಾ ನಾಯ್ಕ ಅವರಿಗೆ ₹32 ಸಾವಿರ ಮೊತ್ತದ ಚೆಕ್‌ ಹಸ್ತಾಂತರಿಸಿದರು.

‘ಧಾರವಾಡ ಹಾಲು ಒಕ್ಕೂಟದ ವತಿಯಿಂದ ಆಯಾ ಉಪ ವಿಭಾಗದ ವ್ಯಾಪ್ತಿಯ ಒಕ್ಕೂಟದ ಪಶು ವೈದ್ಯರ ಮೂಲಕ ಹಾಲು ಉತ್ಪಾದಕರ ಜಾನುವಾರುಗಳಿಗೆ ವಿಮಾ ಸೌಲಭವನ್ನು ಕಲ್ಪಿಸಿಕೊಡಲಾಗುತ್ತಿದೆ. ಕೇವಲ ₹400 ರಿಂದ ₹500 ವಿಮಾ ಕಂತು ಪಾವತಿಸಿದರೆ ಹೈನುಗಾರರು ಆಕಳಿಗೆ ಪರಿಹಾರ ಪಡೆಯಲು ಅವಕಾಶವಾಗುತ್ತಿದೆ’ ಎಂದು ಸುರೇಶ್ಚಂದ್ರ ಹೆಗಡೆ ಹೇಳಿದರು.

ADVERTISEMENT

ಮಂಜುನಾಥ ಹೆಗಡೆ, ಗಣೇಶ ಹೆಗಡೆ, ದತ್ತಾತ್ರೇಯ ಹೆಗಡೆ, ರಾಧಾರಮಣ ಉಪಾಧ್ಯಾಯ, ಮಧುಕರ ಹೆಗಡೆ, ಪಶು ವೈದ್ಯಾಧಿಕಾರಿ ಡಾ.ರಾಕೇಶ ತಲ್ಲೂರ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.