ADVERTISEMENT

ಮುಖ್ಯಮಂತ್ರಿ ರಾಜೀನಾಮೆ ಕೇಳುವುದು ಸರಿಯಲ್ಲ: ತುಕಾರಾಂ

​ಪ್ರಜಾವಾಣಿ ವಾರ್ತೆ
Published 12 ಜುಲೈ 2024, 18:42 IST
Last Updated 12 ಜುಲೈ 2024, 18:42 IST
ಈ.ತುಕಾರಾಂ
ಈ.ತುಕಾರಾಂ   

ಶಿರಸಿ: 'ವಾಲ್ಮೀಕಿ ನಿಗಮದ ಹಗರಣದ ತನಿಖೆಯನ್ನು ರಾಜ್ಯ ಸರ್ಕಾರ ಈಗಾಗಲೇ ಎಸ್‌ಐಟಿಗೆ ನೀಡಿದೆ. ಅದರ ವರದಿ ಬಂದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಬೇಕು. ಈಗಲೇ ಬಿಜೆಪಿಯವರು ಮುಖ್ಯಮಂತ್ರಿಯವರ ರಾಜೀನಾಮೆ ಕೇಳುವುದು ಸರಿಯಲ್ಲ' ಎಂದು ಬಳ್ಳಾರಿ ಸಂಸದ ಈ.ತುಕಾರಾಂ ಹೇಳಿದರು. 

‘ವಾಲ್ಮೀಕಿ ನಿಗಮದಲ್ಲಿ ಭ್ರಷ್ಟಾಚಾರ ಆಗಿದೆ ಎಂದು  ಬಿಜೆಪಿಯವರು ಪ್ರತಿಭಟಿಸುವುದು, ವಿರೋಧ ಪಕ್ಷವಾಗಿ ಅದು ಅವರ ಕರ್ತವ್ಯ. ಈ ತಿಂಗಳ 15ರಿಂದ ವಿಧಾನಸಭೆ ಅಧಿವೇಶನ ಆರಂಭವಾಗುತ್ತದೆ. ಅಧಿವೇಶನದಲ್ಲಿ ಈ ಬಗ್ಗೆ  ಚರ್ಚೆ ನಡೆಯಲಿ. ಅಲ್ಲಿ ಬಿಜೆಪಿಯವರು ಬಂದು  ವಿಷಯ ಪ್ರಸ್ತಾಪಿಸಲಿ’ ಎಂದು ಅವರು ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ಸಂಡೂರು ಕ್ಷೇತ್ರಕ್ಕೆ ನಡೆಯುವ ಉಪಚುನಾವಣೆಯಲ್ಲಿ ನನ್ನ ಮಗಳಿಗೆ ಟಿಕೆಟ್‌ ನೀಡುವಂತೆ ಈವರೆಗೂ ಕೇಳಿಲ್ಲ. ಪಕ್ಷದಿಂದ ಸರ್ವೆ ನಡೆದು ಆ ಪ್ರಕಾರ ಟಿಕೆಟ್‌ ನೀಡಲಾಗುತ್ತದೆ. ಸಂಡೂರಿನಲ್ಲಿ ಯಾರು ಸೂಕ್ತ ಅಭ್ಯರ್ಥಿ ಎಂಬುದನ್ನು ಪಕ್ಷದ ಹಿರಿಯರು ಚರ್ಚಿಸುವರು. ಎಲ್ಲ ಸಮುದಾಯದ ಅಭಿಪ್ರಾಯವನ್ನೂ ಪಡೆಯಲಾಗುವುದು’ ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.