ADVERTISEMENT

ಭಟ್ಕಳ ನ್ಯಾಯಾಲಯಕ್ಕೆ ನ್ಯಾ. ಕೆ.ನಟರಾಜ್ ಭೇಟಿ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2023, 13:55 IST
Last Updated 1 ಅಕ್ಟೋಬರ್ 2023, 13:55 IST
 ಭಟ್ಕಳ ಜೆ.ಎಂ.ಎಫ್.ಸಿ ಕೋರ್ಟ್‌ಗೆ ಭೇಟಿ ನೀಡಿದ ಹೈಕೋರ್ಟ್‌ ನ್ಯಾಯಾಧೀಶ ಕೆ. ನಟರಾಜ್‌ ಅವರು ವಕೀಲರನ್ನು ಉದ್ದೇಶಿಸಿ ಮಾತನಾಡಿದರು   
 ಭಟ್ಕಳ ಜೆ.ಎಂ.ಎಫ್.ಸಿ ಕೋರ್ಟ್‌ಗೆ ಭೇಟಿ ನೀಡಿದ ಹೈಕೋರ್ಟ್‌ ನ್ಯಾಯಾಧೀಶ ಕೆ. ನಟರಾಜ್‌ ಅವರು ವಕೀಲರನ್ನು ಉದ್ದೇಶಿಸಿ ಮಾತನಾಡಿದರು      

ಭಟ್ಕಳ: ಕರ್ನಾಟಕ ಉಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಹಾಗೂ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಕೆ.ನಟರಾಜನ್ ಅವರು ಭಾನುವಾರ ಭಟ್ಕಳ ನ್ಯಾಯಾಲಯ ಸಂಕೀರ್ಣಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಭಟ್ಕಳ ವಕೀಲರ ಸಂಘಕ್ಕೆ ಭೇಟಿ ನೀಡಿದ ಅವರನ್ನು ವಕೀಲರ ಸಂಘದ ವತಿಯಿಂದ ಸನ್ಮಾನಿಸಿ, ಕಟ್ಟಡ ಸಮಿತಿಯ ವತಿಯಿಂದ ನೂತನ ನ್ಯಾಯಾಲಯ ಸಂಕೀರ್ಣದ ಕಾಮಗಾರಿ ಶೀಘ್ರ ಸ್ಥಾಪಿಸುವಂತೆ ಹಾಗೂ ಹೆಚ್ಚುವರಿ ಜಿಲ್ಲಾ ನ್ಯಾಯಾಲಯದ ಪೀಠ ಸ್ಥಾಪಿಸುವಂತೆ ಮನವಿ ಸಲ್ಲಿಸಲಾಯಿತು.

ನಂತರ ಮಾತನಾಡಿದ ನ್ಯಾಯಮೂರ್ತಿ ಕೆ.ನಟರಾಜನ್, ‘ಭಟ್ಕಳ ಬಾರ್ ಅಸೋಸಿಯೇಶನ್ ಚಿಕ್ಕದಾದರೂ ನ್ಯಾಯಾಂಗಕ್ಕೆ ಇದರ ಕೊಡುಗೆ ಅಪಾರವಾಗಿದೆ. ಇಲ್ಲಿನ ಕಿರಿಯ ವಕೀಲರು ಮುಂದೆಯೂ ನ್ಯಾಯಾಂಗದ ಸೇವೆಗೆ ಸೇರುವಂತಾಗಲಿ’ ಎಂದರು.

ADVERTISEMENT

ಭಟ್ಕಳದಲ್ಲಿ ನೂತನ ಕಟ್ಟಡ ಮಂಜೂರಿ ಮಾಡುವ ಬಗ್ಗೆ ಕ್ರಮ ವಹಿಸಲಾಗುವುದು. ಬೆಂಗಳೂರಿಗೆ ಹೋದ ನಂತರ ಜಿಲ್ಲಾ ನ್ಯಾಯಾಲಯದ ಹೆಚ್ಚುವರಿ ಪೀಠ ಮಂಜೂರಿಗೆ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು.

ಕಟ್ಟಡ ಸಮಿತಿಯ ಅಧ್ಯಕ್ಷ ಎಂ.ಎಲ್.ನಾಯ್ಕ, ಜಿಲ್ಲಾ ಸತ್ರ ನ್ಯಾಯಾಧೀಶ ಜಿ.ಎಸ್.ಉದಯಕುಮಾರ್, ಹಿರಿಯ ಸಿವಿಲ್ ನ್ಯಾಯಾಧೀಶ ಕಾಂತ ಕುರಣಿ, ಪ್ರಧಾನ ಸಿವಿಲ್ ನ್ಯಾಯಾಧೀಶ ವಿನೋದ ಬಾಳ ನಾಯ್ಕ, ವಕೀಲರ ಸಂಘದ ಅಧ್ಯಕ್ಷ ಗಣೇಶ ದೇವಾಡಿಗ, ಲೋಕೋಪಯೋಗಿ ಇಲಾಖೆಯ ಸಹಾಯಕ ಎಂಜಿನಿಯರ್‌, ಹಿರಿಯ ವಕೀಲರಾದ ಜೆ.ಡಿ.ನಾಯ್ಕ, ವಿ.ಎಫ್.ಗೋಮ್ಸ್ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.