ADVERTISEMENT

ಕಳಚೆ ಮುಂಗಾರು ಟ್ರೋಫಿ: ಟೀಮ್ ವಿರಾಟ್ ಮಡಿಲಿಗೆ

​ಪ್ರಜಾವಾಣಿ ವಾರ್ತೆ
Published 3 ಜೂನ್ 2025, 14:05 IST
Last Updated 3 ಜೂನ್ 2025, 14:05 IST
ಯಲ್ಲಾಪುರ ತಾಲ್ಲೂಕು ಕಳಚೆಯಲ್ಲಿ ನಡೆದ ಮುಂಗಾರು ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ವಿಜೇತ ತಂಡ
ಯಲ್ಲಾಪುರ ತಾಲ್ಲೂಕು ಕಳಚೆಯಲ್ಲಿ ನಡೆದ ಮುಂಗಾರು ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ವಿಜೇತ ತಂಡ   

ಯಲ್ಲಾಪುರ: ತಾಲ್ಲೂಕಿನ ಕಳಚೆಯ ಕೆಪಿಎಲ್‌ ಮೈದಾನದಲ್ಲಿ ಈಚೆಗೆ ನಡೆದ ಮುಂಗಾರು ಟ್ರೋಫಿ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಪ್ರಮೋದ ಹೆಬ್ಬಾರ ನಾಯಕತ್ವದ ಟೀಮ್ ವಿರಾಟ್ ಚಾಂಪಿಯನ್ ಸ್ಥಾನ ಪಡೆದಿದೆ. ಮಲವಳ್ಳಿಯ ಶಂಕರ ಭಟ್ಟ ನಾಯಕತ್ವದ ಎಚ್‌ಬಿ ಬಾಯ್ಸ್ ತಂಡ ರನ್ನರ್ಸ್ ಅಪ್ ಪಡೆದುಕೊಂಡಿದೆ.

ಚಾಂಪಿಯನ್ ತಂಡದಲ್ಲಿ ಸದಸ್ಯರಾದ ನಾರಾಯಣ ಭಾಗ್ವತ್, ಶಿವಪ್ರಸಾದ್ ಭಟ್ಟ, ರವೀಶ್ ಭಟ್ಟ, ಸತೀಶ್ ಹೆಗಡೆ, ದತ್ತಗುರು ಭಟ್ಟ, ರಾಘವೇಂದ್ರ ಭಟ್ಟ ಬೆಳಸೂರ್ ಹಾಗೂ ಸೌರವ್ ಗಾಂವ್ಕರ ಉತ್ತಮ ಪ್ರದಶ೯ನ ನೀಡಿದರು.

ಪಂದ್ಯ ಪುರುಷ ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿಯನ್ನು ದತ್ತಗುರು ಭಟ್, ಸರಣಿ ಪುರುಷ ಪ್ರಶಸ್ತಿಯನ್ನು ರವೀಶ್ ಭಟ್ ಇಟ್ಲಮನೆ, ಬೆಸ್ಟ್ ಬ್ಯಾಟ್ಸಮನ್ ಪ್ರಶಸ್ತಿಯನ್ನು ಮಂಜುನಾಥ್ ಭಟ್ಟ ಬಾಳ್ನಮನೆ ಪಡೆದುಕೊಂಡರು.

ADVERTISEMENT

ಪ್ರಮುಖರಾದ ಜಿ. ಅರ್. ಹೆಗಡೆ, ಶ್ರೀಪಾದ ಗಾಂವ್ಕರ ಕವಳೆಕೆರಿ, ಉಮೇಶ್ ಭಾಗ್ವತ್, ಶ್ರೀಕಾಂತ್ ಹೆಬ್ಬಾರ್, ಮಂಜುನಾಥ್ ಭಟ್ಟ ಬಾಳ್ನಮನೆ, ಶಂಕರ ಭಟ್ಟ ಮಲವಳ್ಳಿ, ನಾರಾಯಣ ಭಾಗ್ವತ್ ಸಹಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.