
ಇ.ಎಸ್.ಸುಧೀಂದ್ರ
ಕಾರವಾರ: ‘ಮಾರ್ಚ್ ಅಂತ್ಯದೊಳಗೆ ರಾಜ್ಯದಲ್ಲಿ ಜೈವಿಕ ಇಂಧನ ನೀತಿ ಜಾರಿಗೊಳಿಸಲಾಗುವುದು’ ಎಂದು ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಇ.ಎಸ್.ಸುಧೀಂದ್ರ ಹೇಳಿದರು.
ಬುಧವಾರ ಇಲ್ಲಿನ ಜೈವಿಕ ಇಂಧನ ಉತ್ಪಾದನಾ ಘಟಕ ಪರಿಶೀಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಜೈವಿಕ ಡೀಸೆಲ್, 2ಜಿ ಎಥೆನಾಲ್ ಸೇರಿ ನೈಸರ್ಗಿಕ ಕಚ್ಚಾವಸ್ತು ಬಳಸಿ ಸಿದ್ಧಪಡಿಸುವ ಜೈವಿಕ ಇಂಧನ ಉತ್ಪಾದನೆ ಹೆಚ್ಚಳ ಮಾಡಲು ಯೋಜನೆ ರೂಪಿಸಲಾಗುತ್ತಿದೆ’ ಎಂದರು.
‘ರಾಜ್ಯದ 34 ಜೈವಿಕ ಉತ್ಪಾದನಾ ಘಟಕಗಳನ್ನು ಮೇಲ್ದರ್ಜೆಗೇರಿಸಲಾಗುವುದು. ಜೈವಿಕ ಇಂಧನ ತಯಾರಿಕೆಗೆ ಹೊಂಗೆ ಬೀಜದಂತಹ ಕಿರುಅರಣ್ಯ ಉತ್ಪನ್ನ ನೀಡುವ ರೈತರಿಗೆ ಸಹಾಯಧನ ಒದಗಿಸಲಾಗುವುದು’ ಎಂದರು.
‘ಜೈವಿಕ ಇಂಧನ ಉತ್ಪಾದನೆ ಕ್ಷೇತ್ರ ₹33 ಸಾವಿರ ಕೋಟಿ ಬಂಡವಾಳ ತರಬಲ್ಲದು. ಇದಕ್ಕಾಗಿಯೇ ಪ್ರತ್ಯೇಕ ಇಲಾಖೆ ರೂಪಿಸುವ ಬಗ್ಗೆಯೂ ಉನ್ನತಮಟ್ಟದಲ್ಲಿ ಚಿಂತನೆ ನಡೆದಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.