ADVERTISEMENT

Karnataka Rains | ದಾಂಡೇಲಿಯಲ್ಲಿ ಸತತ ಮಳೆ: ಕುಸಿದ ಕಾಂಪೌಂಡ್

​ಪ್ರಜಾವಾಣಿ ವಾರ್ತೆ
Published 24 ಜೂನ್ 2025, 15:15 IST
Last Updated 24 ಜೂನ್ 2025, 15:15 IST
ಸತತ ಮಳೆಯಿಂದಾಗಿ ದಾಂಡೇಲಿಯ ಕುಳಗಿ ರಸ್ತೆಯ ವೆಂಕಟರಮಣ ದೇವಸ್ಥಾನದ ಹಿಂಭಾಗದಲ್ಲಿ ಕಾಂಪೌಂಡ್ ಗೋಡೆ ಕುಸಿದಿದೆ
ಸತತ ಮಳೆಯಿಂದಾಗಿ ದಾಂಡೇಲಿಯ ಕುಳಗಿ ರಸ್ತೆಯ ವೆಂಕಟರಮಣ ದೇವಸ್ಥಾನದ ಹಿಂಭಾಗದಲ್ಲಿ ಕಾಂಪೌಂಡ್ ಗೋಡೆ ಕುಸಿದಿದೆ   

ದಾಂಡೇಲಿ: ಸತತ ಮಳೆ ಗಾಳಿಯಿಂದಾಗಿ ಇಲ್ಲಿನ ಟೌನ್‌ಶಿಪ್‌ನಲ್ಲಿರುವ ಸೇಂಟ್ ಮೈಕಲ್ ಕಾನ್ವೆಂಟ್ ಶಾಲೆಯ ಮುಂಭಾಗದ ರಸ್ತೆ ಬದಿಯಲ್ಲಿರುವ ಬೃಹತ್ ಗಾತ್ರದ ಮರವೊಂದರ ಟೊಂಗೆ ಸೋಮವಾರ ಧರೆಗುರುಳಿದೆ.

ಈ ಸಮಯದಲ್ಲಿ ಶಾಲೆ ನಡೆಯುತ್ತಿತ್ತು. ರಸ್ತೆಯಲ್ಲಿ ಮಕ್ಕಳು ಅಥವಾ ಇನ್ಯಾರೂ ಇಲ್ಲದೆ ಇದ್ದ ಕಾರಣ ಯಾವುದೇ ಅನಾಹುತ ನಡೆದಿಲ್ಲ. ಘಟನೆ ನಡೆದ ತಕ್ಷಣವೇ ಅರಣ್ಯ ಇಲಾಖೆ ಸಿಬ್ಬಂದಿ ಬಿದ್ದ ಮರವನ್ನು ತೆರವುಗೊಳಿಸಿ, ಸುಗಮ ಸಂಚಾರಕ್ಕೆ ಅನುವು ಮಾಡಿ ಕೊಟ್ಟಿದ್ದಾರೆ.

ಕುಸಿದ ಕಾಂಪೌಂಡ್: ಕುಳಗಿ ರಸ್ತೆಯ ವೆಂಕಟರಮಣ ದೇವಸ್ಥಾನದ ಹಿಂದಿನ ಭಾಗದ ಕಾಂಪೌಂಡ್ ಮಂಗಳವಾರ ಕುಸಿದು ಬಿದ್ದಿದೆ. ಅಲ್ಲಿಯೂ ಯಾವುದೇ ಹಾನಿ ಸಂಭವಿಸಿಲ್ಲ.

ADVERTISEMENT

ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ. ಕುಸಿದ ಕಾಂಪೌಂಡ್ ತೆರವು ಕಾರ್ಯ ಮಾಡುತ್ತೇವೆ ಎಂದು ದೇವಸ್ಥಾನ ಕಮಿಟಿಯ ಕಾರ್ಯದರ್ಶಿ ಸುರೇಶ್ ಕಾಮತ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.