ADVERTISEMENT

ಉತ್ತರ ಕನ್ನಡ | ನೀರಿನ ಶುಲ್ಕ ₹140 ಕೋಟಿ ಬಾಕಿ

ನಿತ್ಯ 1.50 ಕೋಟಿ ಲೀ. ನೀರು ಪೂರೈಕೆ: ನಿರ್ವಹಣೆಗೆ ಸಮಸ್ಯೆ

ಗಣಪತಿ ಹೆಗಡೆ
Published 30 ಆಗಸ್ಟ್ 2025, 6:12 IST
Last Updated 30 ಆಗಸ್ಟ್ 2025, 6:12 IST
<div class="paragraphs"><p>ಕುಡಿಯುವ ನೀರು (ಪ್ರಾತಿನಿಧಿಕ ಚಿತ್ರ)</p></div>

ಕುಡಿಯುವ ನೀರು (ಪ್ರಾತಿನಿಧಿಕ ಚಿತ್ರ)

   

ಕಾರವಾರ: ಗಂಗಾವಳಿ ನದಿಯಿಂದ ಕುಡಿಯುವ ನೀರು ಪೂರೈಸಿದ್ದಕ್ಕೆ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಗೆ ನಗರ, ಗ್ರಾಮಿಣ ಸ್ಥಳೀಯ ಸಂಸ್ಥೆಗಳು ಪಾವತಿಸಬೇಕಿದ್ದ ₹140.65 ಕೋಟಿ ಶುಲ್ಕ ನೀರು ಬಳಕೆ ಶುಲ್ಕ ಬಾಕಿ ಇರಿಸಿಕೊಂಡಿವೆ.

ಗಂಗಾವಳಿ ನದಿಯಿಂದ ನೀರನ್ನು ಕಾರವಾರ ನಗರ, ಅಂಕೋಲಾ ಪಟ್ಟಣ, ಸೀಬರ್ಡ್ ನೌಕಾನೆಲೆ, ಬಿಣಗಾದ ಗ್ರಾಸಿಮ್ ಇಂಡಸ್ಟ್ರೀಸ್, 13 ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂರಾರು ಹಳ್ಳಿಗಳಿಗೆ ಪೂರೈಕೆ ಮಾಡಲಾಗುತ್ತಿದೆ. 50 ವರ್ಷಗಳಿಂದ ಈ ಯೋಜನೆ ಜಾರಿಯಲ್ಲಿದೆ.

ADVERTISEMENT

‘ಕಳೆದ ಒಂದೂವರೆ ದಶಕದಿಂದಲೂ ನೀರಿನ ಬಳಕೆ ಶುಲ್ಕ ಬಾಕಿ ಉಳಿದುಕೊಂಡಿದೆ. ಯೋಜನೆ ವ್ಯಾಪ್ತಿಯ ಪ್ರದೇಶಗಳಿಗೆ ಪ್ರತಿನಿತ್ಯ 1.50 ಕೋಟಿ ಲೀಟರ್ ನೀರು ಪೂರೈಕೆ ಮಾಡಲಾಗುತ್ತಿದೆ. ನೌಕಾನೆಲೆ ವಿಸ್ತರಣೆ, ನಗರ ಪ್ರದೇಶದ ವಿಸ್ತರಣೆಯಿಂದ ಈ ಪ್ರಮಾಣ ಹಂತ ಹಂತವಾಗಿ ಏರಿಕೆ ಆಗುತ್ತಲೇ ಇದೆ’ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾರ್ಯನಿರ್ವಾಹಕ ಎಂಜಿನಿಯರ್ ಶಿವರಾಮ ನಾಯ್ಕ ತಿಳಿಸಿದರು.

‘ಸ್ಥಳೀಯ ಸಂಸ್ಥೆಗಳ ಮೂಲಕ ಸಾರ್ವಜನಿಕರಿಗೆ ಪೂರೈಕೆಯಾಗುವ ನೀರಿಗೆ ಬಳಕೆ ಆಧಾರದಲ್ಲಿ ಶುಲ್ಕ ಆಕರಿಸಲಾಗುತ್ತದೆ. ಸಗಟು ದರದಲ್ಲೇ ಈ ಶುಲ್ಕ ಸಂಗ್ರಹಿಸಲಾಗುತ್ತಿದೆ. ಒಂದೂವರೆ ದಶಕದಿಂದಲೂ ಏಕರೂಪದ ದರದಂತೆ ಶುಲ್ಕ ಲೆಕ್ಕಾಚಾರ ಹಾಕಲಾಗುತ್ತಿದೆ. ಆದರೂ, ಈವರೆಗೆ ಸ್ಥಳೀಯ ಸಂಸ್ಥೆಗಳು ಪೂರ್ಣ ಪ್ರಮಾಣದಲ್ಲಿ ಶುಲ್ಕ ಪಾವತಿಸಿಲ್ಲ. ಆಗಾಗ ಅಲ್ಪ ಮೊತ್ತ ಪಾವತಿಸುತ್ತಿವೆಯೇ ಹೊರತು, ದೊಡ್ಡ ಮೊತ್ತ ಭರಣಕ್ಕೆ ಮುಂದಾಗುತ್ತಿಲ್ಲ. ಇದರಿಂದ ಬಡ್ಡಿಯೂ ಸೇರಿ ಬಾಕಿ ಮೊತ್ತ ಹೆಚ್ಚಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.