ADVERTISEMENT

ಶಿರಸಿ ಬಳಿಯ ಸರಗುಪ್ಪದಲ್ಲಿ ಕಾಳಿಂಗ ಸರ್ಪ ರಕ್ಷಣೆ

​ಪ್ರಜಾವಾಣಿ ವಾರ್ತೆ
Published 24 ಜುಲೈ 2022, 16:00 IST
Last Updated 24 ಜುಲೈ 2022, 16:00 IST
ಶಿರಸಿ ತಾಲ್ಲೂಕಿನ ಸರಗುಪ್ಪ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ಸೆರೆಹಿಡಿದರು.
ಶಿರಸಿ ತಾಲ್ಲೂಕಿನ ಸರಗುಪ್ಪ ಗ್ರಾಮದಲ್ಲಿ ಕಾಣಿಸಿಕೊಂಡಿದ್ದ ಕಾಳಿಂಗ ಸರ್ಪವನ್ನು ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ಸೆರೆಹಿಡಿದರು.   

ಶಿರಸಿ: ತಾಲ್ಲೂಕಿನ ದೇವನಳ್ಳಿ ಗ್ರಾಮ ಪಂಚಾಯ್ತಿ ವ್ಯಾ‍ಪ್ತಿಯ ಸರಗುಪ್ಪ ಗ್ರಾಮದ ಅಡಿಕೆ ತೋಟದ ಪಕ್ಕದಲ್ಲಿ ಕಾಣಿಸಿಕೊಂಡಿದ್ದ, ಸುಮಾರು 12 ಅಡಿಯಷ್ಟು ಉದ್ದದ ಕಾಳಿಂಗ ಸರ್ಪವನ್ನು ಭಾನುವಾರ ರಕ್ಷಿಸಿ ಕಾಡಿಗೆ ಬಿಡಲಾಗಿದೆ.

ನಾರಾಯಣ ಗೌಡ ಎಂಬುವವರಿಗೆ ಸೇರಿದ ತೋಟದ ಪಕ್ಕದಲ್ಲಿ ಎರಡು ದಿನದ ಹಿಂದೆ ಹಾವು ಕಾಣಿಸಿಕೊಂಡಿತ್ತು. ಕಾಡಿಗೆ ತೆರಳಬಹುದು ಎಂದು ಮಾಲೀಕ ನಿರ್ಲಕ್ಷಿಸಿದ್ದರು. ಹಳ್ಳದ ಪಕ್ಕದ ಪೊದೆಯ ಮೇಲೆ ಕುಳಿತಿದ್ದ ಹಾವು ಅಕ್ಕಪಕ್ಕವೇ ಸುಳಿದಾಡುತ್ತಿದ್ದರಿಂದ ಆತಂಕಿತರಾಗಿದ್ದರು.

ಉರಗ ಪ್ರೇಮಿ ಪ್ರಶಾಂತ ಹುಲೇಕಲ್ ಅವರನ್ನು ಕರೆಯಿಸಿ ಕಾಳಿಂಗ ಸರ್ಪ ರಕ್ಷಣೆ ಮಾಡಲಾಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.