ADVERTISEMENT

ಸುರಕ್ಷಿತವಾಗಿ ಕಾಡು ಸೇರಿದ ಒಂಬತ್ತು ಅಡಿ ಉದ್ದದ ಕಾಳಿಂಗ ಸರ್ಪ

​ಪ್ರಜಾವಾಣಿ ವಾರ್ತೆ
Published 19 ಜೂನ್ 2019, 12:09 IST
Last Updated 19 ಜೂನ್ 2019, 12:09 IST
ಕಾರವಾರ ತಾಲ್ಲೂಕಿನ ಹೋಟೆಗಾಳಿ ಗ್ರಾಮದಲ್ಲಿ ಕಂಡುಬಂದ ಒಂಬತ್ತು ಅಡಿ ಉದ್ದದ ಕಾಳಿಂಗ ಸರ್ಪವನ್ನು, ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದರು
ಕಾರವಾರ ತಾಲ್ಲೂಕಿನ ಹೋಟೆಗಾಳಿ ಗ್ರಾಮದಲ್ಲಿ ಕಂಡುಬಂದ ಒಂಬತ್ತು ಅಡಿ ಉದ್ದದ ಕಾಳಿಂಗ ಸರ್ಪವನ್ನು, ಅರಣ್ಯ ಇಲಾಖೆ ಸಿಬ್ಬಂದಿ ಹಿಡಿದರು   

ಕಾರವಾರ: ತಾಲ್ಲೂಕಿನ ಹೋಟೆಗಾಳಿ ಗ್ರಾಮದ ಲಂಬೋದರ ತಳೇಕರ ಎಂಬುವವರ ಮನೆಯ ಸಮೀಪ ಬಂದ ಒಂಬತ್ತು ಅಡಿ ಉದ್ದದ ಕಾಳಿಂಗ ಸರ್ಪವನ್ನು, ಅರಣ್ಯ ಇಲಾಖೆ ಸಿಬ್ಬಂದಿ ಮಂಗಳವಾರ ಹಿಡಿದು ಸುರಕ್ಷಿತವಾಗಿ ಕಾಡಿಗೆ ಬಿಟ್ಟರು.

ಮನೆಯ ಪಕ್ಕದಲ್ಲಿ ಸಂಗ್ರಹಿಸಿಟ್ಟ ಕಟ್ಟಿಗೆಯಲ್ಲಿ ಹಾವು ಕಾಣಿಸಿಕೊಂಡಿತ್ತು. ಈ ಬಗ್ಗೆ ಲಂಬೋದರ ಅವರು ಸಮಾಜ ಸೇವಕ ಅಶೋಕ ಗಜಿನಕರ ಮೂಲಕ ಅರಣ್ಯ ಇಲಾಖೆಯನ್ನು ಸಂಪರ್ಕಿಸಿದರು. ಬಳಿಕ ಗೋಪಶಿಟ್ಟಾ ವಲಯ ಅರಣ್ಯಾಧಿಕಾರಿ ಜಿ.ವಿ.ನಾಯ್ಕ ಅವರ ಮಾರ್ಗದರ್ಶನದಲ್ಲಿ ಅರಣ್ಯ ರಕ್ಷಕರಾದ ರಮೇಶ ಬಡಿಗೇರ ಮತ್ತು ಮಲ್ಲಪ್ಪ ಮಾಂಜರಿ, ಪ್ರಶಾಂತ ಅವರು ಜೊತೆಗೂಡಿ ಹಾವನ್ನು ಹಿಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT