ಬಂಧನ
(ಪ್ರಾತಿನಿಧಿಕ ಚಿತ್ರ)
ಭಟ್ಕಳ: ಪಟ್ಟಣದ ಸಂತೆ ಮಾರುಕಟ್ಟೆಯಲ್ಲಿ ವ್ಯಾಪಾರದ ವಿಷಯಕ್ಕೆ ಇಬ್ಬರ ನಡುವೆ ಭಾನುವಾರ ನಡೆದ ಗಲಾಟೆಯಲ್ಲಿ ಅಕ್ಬರ ಭಾಷಾ ಎಂಬುವವನು ಇಬ್ರಾಹಿಂಗೆ ಚಾಕುವಿನಿಂದ ಇರಿದು ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿ ಬಂಧಿಸುವಲ್ಲಿ ಸಫಲರಾಗಿದ್ದಾರೆ.
ಶ್ರೀಜಾಲಿಯ ಪಿರ್ದೋಸ್ ನಗರ ನಿವಾಸಿ ಅಕ್ಬರ್ ಬಾಷಾ ಬಂಧಿತ ಆರೋಪಿ.
ಜಾಲಿಯ ಬದ್ರಿಯಾ ಕಾಲೊನಿ ನಿವಾಸಿ ಮೊಹಮ್ಮದ ಹನೀಫ್ ಬಳಿ ಹಾನಗಲ್ ಮೂಲದ ನಿವಾಸಿ ಇಬ್ರಾಹಿಂ ಹಣ್ಣು ತರಲು ತೆರಳಿದ್ದಾಗ ಅಕ್ಬರ್ ಬಾಷಾ ಹಾಗೂ ಇಬ್ರಾಹಿಂ ನಡುವೆ ಗಲಾಟೆ ನಡೆದಿತ್ತು. ಗಲಾಟೆ ವಿಕೋಪಕ್ಕೆ ಹೋದಾಗ ಕೋಪಗೊಂಡ ಅಕ್ಬರ್ ಇಬ್ರಾಹಿಂನ ಹೊಟ್ಟೆ ಹಾಗೂ ಸೊಂಟದ ಹಿಂಭಾಗಕ್ಕೆ ಚಾಕುವಿನಿಂದ ಇರಿದು ಪರಾರಿಯಾಗಿದ್ದರು.
ಶಹರ ಠಾಣಾ ಸಿಪಿಐ ದಿವಾಕರ ಪಿ.ಎಂ. ಮಾರ್ಗದರ್ಶನದಲ್ಲಿ ಪಿಎಸೈ ನವೀನ್ ನಾಯ್ಕ ಹಾಗೂ ತಿಮ್ಮಪ್ಪ ಎಸ್ ನೇತೃತ್ವದ ತಂಡ ಒಬ್ಬ ಆರೋಪಿಯನ್ನು ಬಂಧಿಸಿದ್ದಾರೆ. ಇತನಿಗೆ ಸಹಕರಿಸಿದ ಇನ್ನೊಬ್ಬ ಆರೋಪಿ ಪೀರ್ದೋಸ್ ನಗರ ನಿವಾಸಿ ಅಕ್ಬರ್ ಅಹ್ಮದ ತಲೆಮರೆಸಿಕೊಂಡಿದ್ದು, ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.