ADVERTISEMENT

ಕಾಯಕಲ್ಪಕ್ಕೆ ಕಾದಿದೆ ಕೊಪ್ಪಳಗದ್ದೆ ಕೆರೆ

ಎರಡೂವರೆ ಎಕರೆಯಲ್ಲಿ ವ್ಯಾಪಿಸಿರುವ ಕೆರೆ ಹೂಳೆತ್ತಿಸಲು ಗ್ರಾಮಸ್ಥರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 11 ಜುಲೈ 2021, 11:38 IST
Last Updated 11 ಜುಲೈ 2021, 11:38 IST
ಶಿರಸಿ ತಾಲ್ಲೂಕಿನ ಕರಸುಳ್ಳಿಯ ಕೊಪ್ಪಳಗದ್ದೆ ಕೆರೆಯಲ್ಲಿ ಹೂಳು ತುಂಬಿ, ಗಿಡಗಂಟಿಗಳು ಬೆಳೆದಿವೆ
ಶಿರಸಿ ತಾಲ್ಲೂಕಿನ ಕರಸುಳ್ಳಿಯ ಕೊಪ್ಪಳಗದ್ದೆ ಕೆರೆಯಲ್ಲಿ ಹೂಳು ತುಂಬಿ, ಗಿಡಗಂಟಿಗಳು ಬೆಳೆದಿವೆ   

ಶಿರಸಿ: ತಾಲ್ಲೂಕಿನ ಯಡಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಕರಸುಳ್ಳಿಯಲ್ಲಿರುವ ಕೊಪ್ಪಳಗದ್ದೆ ಕೆರೆ ಹೂಳು ತುಂಬಿಕೊಂಡಿದ್ದು, ಹೂಳು ತೆಗೆಯಿಸಲು ಸಂಬಂಧಪಟ್ಟ ಇಲಾಖೆ ಮುಂದಾಗಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಗ್ರಾಮದ ಸರ್ವೇ ನಂ.229ರಲ್ಲಿ ಇರುವ ಈ ಕೆರೆಯ ವಿಸ್ತೀರ್ಣ ಸುಮಾರು ಎರಡೂವರೆ ಎಕರೆ. ಅಕ್ಕಪಕ್ಕದ ಹತ್ತಾರು ಎಕರೆ ಭತ್ತದ ಗದ್ದೆಗೆ ನೀರು ಒದಗಿಸಲು ಇದು ಸಹಾಯಕವಾಗಿತ್ತು. ಈಚಿನ ವರ್ಷಗಳಲ್ಲಿ ಹೂಳಿನ ಪ್ರಮಾಣ ಏರಿಕೆಯಾಗುತ್ತಿರುವ ಕಾರಣ ಅತ್ಯದಷ್ಟು ನೀರು ಸಂಗ್ರಹವಾಗುತ್ತಿಲ್ಲ. ಜೊತೆಗ. ಈ ಕೆರೆ ಸಮೀಪದಲ್ಲಿರುವ ಇನ್ನೊಂದು ಪುಟ್ಟ ಕೆರೆಯೂ ಬತ್ತುವ ಆತಂಕ ಎದುರಾಗಿದೆ.

‘ತಾಲ್ಲೂಕಿನ ಪೂರ್ವಭಾಗದಲ್ಲಿ ಹೆಚ್ಚಿನ ಕೆರೆಗಳಿವೆ. ಪಶ್ಚಿಮ ಭಾಗದಲ್ಲಿರುವ ಬೆರಳೆಣಿಕೆಯಷ್ಟು ಕೆರೆಗಳ ಪೈಕಿ ಇದೂ ಒಂದು. ಎರಡು ತಲೆಮಾರುಗಳು ಕಳೆದರೂ ಕೆರೆಗೆ ಕಾಯಕಲ್ಪ ನೀಡಲಾಗಿಲ್ಲ. ವರ್ಷವೂ ಕೆರೆಯಲ್ಲಿ ಹೂಳು ತುಂಬುತ್ತಿರುವುದರಿಂದ ಗ್ರಾಮದಲ್ಲಿರುವ ಜಲಮೂಲಗಳ ಮೇಲೂ ಅಡ್ಡಪರಿಣಾಮ ಬೀರಿದೆ’ ಎನ್ನುತ್ತಾರೆ ಗ್ರಾಮಸ್ಥರಾದ ಅನಂತ ಭಟ್ಟ, ಪ್ರಶಾಂತ ಭಟ್ಟ, ಯೋಗೀಶ ಭಟ್ಟ.

ADVERTISEMENT

‘ಕೆರೆ ಹೂಳೆತ್ತಿಸಲು ದೊಡ್ಡ ಮೊತ್ತದ ಅಗತ್ಯವಿದೆ. ಹೀಗಾಗಿ ಗ್ರಾಮಸ್ಥರೇ ಹೂಳೆತ್ತಿಸುವುದು ಸವಾಲಿನ ಕೆಲಸ. ಜನಪ್ರತಿನಿಧಿಗಳು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಈ ಬಗ್ಗೆ ಗಮನಹರಿಸಿ ಕೆರೆಗೆ ಕಾಯಕಲ್ಪ ಒದಗಿಸಲಿ’ ಎಂದು ಗ್ರಾಮದ ಗಿರೀಶ ಭಟ್ಟ, ನಾಗರಾಜ ಜೋಶಿ ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.