ಸಾವು
(ಪ್ರಾತಿನಿಧಿಕ ಚಿತ್ರ)
ಕುಮಟಾ: ತಾಲ್ಲೂಕಿನ ಹಳಕಾರ ಗ್ರಾಮದ ಕೆರೆಯಲ್ಲಿ ಸೋಮವಾರ ಈಜಲು ಹೋದ ಯುವಕನೊಬ್ಬ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ
ಹೊನ್ನಾವರ ತಾಲ್ಲೂಕಿನ ಕರ್ಕಿ ಗ್ರಾಮದ ಹೊಟೇಲ್ ಒಂದರಲ್ಲಿ ಸ್ವಾಗತಕಾರನಾಗಿದ್ದ ಪಟ್ಟಣದ ಹೊಸಹೆರವಟ್ಟಾದ ನಿಲೇಶ್ ನಾಯ್ಕ (27) ಮೃತರು.
ಗೆಳೆಯರೊಂದಿಗೆ ಕೆರೆಯಲ್ಲಿ ಈಜಾಡುವಾಗ ಮುಳುಗಿದ್ದರು. ಅಗ್ನಿಶಾಮಕ ದಳದ ಸಹಾಯದಿಂದ ಮೇಲೆತ್ತಿ ತಾಲ್ಲೂಕು ಆಸ್ಪತ್ರೆಗೆ ಸಾಗಿಸಿದಾಗ, ಆಗಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ ಎಂದು ಪಿ.ಎಸ್.ಐ ಮಯೂರ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ಕುಮಟಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.