ADVERTISEMENT

ಫಾ.ಡೆನಿಸ್ ಮಸ್ಕರೆನಸ್ ಅಂತಿಮ ಯಾತ್ರೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2019, 17:05 IST
Last Updated 10 ಏಪ್ರಿಲ್ 2019, 17:05 IST
ಹಳಿಯಾಳದ ಕ್ರೈಸ್ತ ಧರ್ಮಗುರು ಫಾ.ಡೆನಿಸ್ ಮಸ್ಕರೆನಸ್ ಅವರ ಪಾರ್ಥಿವ ಶರೀರವನ್ನು ಪಟ್ಟಣದ ಮಿಲಾಗ್ರಿಸ್ ಚರ್ಚ್ ಆವರಣದಿಂದ ಬುಧವಾರ ಅಂತ್ಯಕ್ರಿಯೆಗೆ ಕೊಂಡೊಯ್ದ ಸಂದರ್ಭ.
ಹಳಿಯಾಳದ ಕ್ರೈಸ್ತ ಧರ್ಮಗುರು ಫಾ.ಡೆನಿಸ್ ಮಸ್ಕರೆನಸ್ ಅವರ ಪಾರ್ಥಿವ ಶರೀರವನ್ನು ಪಟ್ಟಣದ ಮಿಲಾಗ್ರಿಸ್ ಚರ್ಚ್ ಆವರಣದಿಂದ ಬುಧವಾರ ಅಂತ್ಯಕ್ರಿಯೆಗೆ ಕೊಂಡೊಯ್ದ ಸಂದರ್ಭ.   

ಹಳಿಯಾಳ:ಕ್ರೈಸ್ತರಧರ್ಮಗುರು ಫಾ.ಡೆನಿಸ್ ಮಸ್ಕರೆನಸ್ (63)ಅವರ ಅಂತ್ಯಕ್ರಿಯೆ ಪಟ್ಟಣದಲ್ಲಿಬುಧವಾರ ನೆರವೇರಿತು. ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗೆ ಗುರಿಯಾಗಿದ್ದ ಅವರು, ಏ.8ರಂದು ನಿಧನರಾಗಿದ್ದರು.

ಬುಧವಾರ ಬೆಳಿಗ್ಗೆ ಪಟ್ಟಣದ ಮಿಲಾಗ್ರಿಸ್ ಚರ್ಚ್‌ನಲ್ಲಿ ಪಾರ್ಥಿವ ಶರೀರವನ್ನುಅಂತಿಮ ದರ್ಶನಕ್ಕಾಗಿ ಇಡಲಾಗಿತ್ತು.ಕ್ರೈಸ್ತರ ಸಂಪ್ರದಾಯದಂತೆ ಮೃತರ ಆತ್ಮಕ್ಕೆ ಶಾಂತಿ ಕೋರಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರಪಾರ್ಥಿವ ಶರೀರದಅಂತಿಮ ಯಾತ್ರೆ ಪ್ರಮುಖ ಬೀದಿಯಿಂದ ಸಾಗಿ ಸ್ಮಶಾನಕ್ಕೆ ತಲುಪಿತು.

ದಕ್ಷಿಣ ಕನ್ನಡ ಜಿಲ್ಲೆಯ ಬಜ್ಪೆಯಲ್ಲಿ 1955ರ ಸೆ.22ರಂದು ಅವರು ಜನಿಸಿದ್ದರು. 1984ರ ಮೇ 12ರಂದು ಗುರುದೀಕ್ಷೆ ಪಡೆದರು. ದಾಂಡೇಲಿಯ ಚರ್ಚ್‌ನಲ್ಲಿ ಮೊದಲ ಧರ್ಮಗುರುವಾಗಿ ಕರ್ತವ್ಯ ನಿಭಾಯಿಸಿದರು. ನಂತರ ಹಳಿಯಾಳ, ಚಂದಾವರ, ದೀವಳ್ಳಿ ಹಾಗೂ ಶಿರಸಿ ಭಾಗಗಳಲ್ಲಿ ಅಧ್ಯಾತ್ಮಿಕ ಸೇವೆ ಸಲ್ಲಿಸಿದರು.

ADVERTISEMENT

ಫಾ.ಡೆನಿಸ್ ಮಸ್ಕರೆನಸ್ಸಹಸ್ರಾರು ಬಡ ಮಕ್ಕಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿದ್ದರು.ಯುವ ಸಮುದಾಯಕ್ಕೆ ಕೌಶಲ, ಶಿಕ್ಷಣ ಪಡೆಯುವಂತೆ ಮಾರ್ಗದರ್ಶನ ಮಾಡುತ್ತಿದ್ದರು. ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡುತ್ತಿದ್ದ ಅವರು, ಸಾರ್ವಜನಿಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸುವಂತೆ ಪ್ರೇರೇಪಣೆ ನೀಡುತ್ತಿದ್ದರು. ಉತ್ತಮ ವಾಗ್ಮಿ ಹಾಗೂ ಉತ್ತಮ ಆಡಳಿತಗಾರರಾಗಿದ್ದರು.

ಬುಧವಾರ ನಡೆದ ಅಂತಿಮ ಯಾತ್ರೆಯಲ್ಲಿ ಜಿಲ್ಲೆಯ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಧರ್ಮಗುರುಗಳು ಪಾಲ್ಗೊಂಡಿದ್ದರು. ಕಾರವಾರ ಧರ್ಮ ಪ್ರಾಂತ್ಯದ ಧರ್ಮಾಧ್ಯಕ್ಷ ಡಾ.ಡೆರಿಸ್ ಫರ್ನಾಂಡಿಸ್ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಸಚಿವ ಆರ್.ವಿ.ದೇಶಪಾಂಡೆ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಘೋಟ್ನೇಕರ, ಬೆಂಗಳೂರು ಗೋಸಾಯಿ ಮಠದ ಮಂಜುನಾಥ ಮಹಾರಾಜ ಹಾಗೂ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ಪದಾಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.