ಅಂಕೋಲಾ: ತಾಲ್ಲೂಕಿನ ಮಾದನಗೇರಿಯ ಹೊಸೂರ ಸೇತುವೆಯ ಬಳಿ ಶುಕ್ರವಾರ ನಸುಕಿವ ಜಾವ ಅಪರಿಚಿತ ವಾಹನ ಡಿಕ್ಕಿಯಾಗಿ ಹೆಣ್ಣು ಚಿರತೆಯೊಂದು ಮೃತ ಪಟ್ಟಿದೆ.
ಅಂದಾಜು ಒಂದೂವರೆ ವರ್ಷದ ಚಿರತೆ ಇದಾಗಿದೆ. ಆಹಾರ ಹುಡುಕಾಟಕ್ಕೆ ಗುಡ್ಡದಿಂದ ಇಳಿದು ರಸ್ತೆ ದಾಟುವಾಗ ವಾಹನ ಬಡಿದಿರಬಹುದು ಎಂದು ಶಂಕಿಸಲಾಗಿದೆ.
'ಚಿರತೆ ಸಾವಿಗೆ ಸಂಬಂಧಿಸಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಅಪಘಾತ ಪಡಿಸಿದವರಿಗೆ ಹುಡುಕಾಟ ನಡೆಸಲಾಗುವುದು' ಎಂದು ಆರ್.ಎಫ್.ಒ. ಜಿ.ವಿ. ನಾಯ್ಕ ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.