ADVERTISEMENT

ಕಾರವಾರ: ಪದವೀಧರ ಮತದಾರರ ನೋಂದಣಿ ನೀರಸ

ಲಕ್ಷಾಂತರ ಮಂದಿಯಿದ್ದರೂ 14,750 ಜನರ ಹೆಸರಷ್ಟೇ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2025, 2:31 IST
Last Updated 8 ನವೆಂಬರ್ 2025, 2:31 IST
<div class="paragraphs"><p>ಪ್ರಾತಿನಿಧಿಕ ಪತ್ರ</p></div>

ಪ್ರಾತಿನಿಧಿಕ ಪತ್ರ

   

ಕಾರವಾರ: ಜಿಲ್ಲೆಯಲ್ಲಿ ಪದವೀಧರ ಮತದಾರರ ನೋಂದಣಿ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ಈ ಬಾರಿಯೂ ನೋಂದಣಿಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಂದಾಜು 2 ಲಕ್ಷಕ್ಕೂ ಹೆಚ್ಚು ಪದವೀಧರರಿದ್ದರೂ ಕೇವಲ 14,750 ಮಂದಿ ಹೆಸರು ನೋಂದಾಯಿಸಿದ್ದಾರೆ.

ವಿಧಾನ ಪರಿಷತ್‌ನ ಪಶ್ಚಿಮ ಪದವೀಧರ ಮತಕ್ಷೇತ್ರಕ್ಕೆ ಒಳಪಡುವ ಉತ್ತರ ಕನ್ನಡದಲ್ಲಿ ಅ.1 ರಿಂದ ನ.6ರ ವರೆಗೆ ಮತದಾರರ ನೋಂದಣಿ ಪ್ರಕ್ರಿಯೆಗೆ ಅವಕಾಶ ಕಲ್ಪಿಸಲಾಗಿತ್ತು. ತಿಂಗಳಿಗೂ ಹೆಚ್ಚು ಕಾಲ ಅವಕಾಶ ಸಿಕ್ಕರೂ ಅಲ್ಪ ಪ್ರಮಾಣದ ಮತದಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಅವರ ಪೈಕಿ ಸರ್ಕಾರಿ ನೌಕರರೇ ಹೆಚ್ಚಿನವರಾಗಿದ್ದಾರೆ.

ADVERTISEMENT

ಕಾರವಾರ ತಾಲ್ಲೂಕಿನಲ್ಲಿ 1,703, ಅಂಕೋಲಾದಲ್ಲಿ 1,510, ಕುಮಟಾದಲ್ಲಿ 2,052, ಹೊನ್ನಾವರದಲ್ಲಿ 1,175, ಭಟ್ಕಳದಲ್ಲಿ 1,016, ಶಿರಸಿಯಲ್ಲಿ 2,454, ಸಿದ್ದಾಪುರದಲ್ಲಿ 1,254, ಯಲ್ಲಾಪುರದಲ್ಲಿ 952, ಮುಂಡಗೋಡದಲ್ಲಿ 874, ಹಳಿಯಾಳದಲ್ಲಿ 806, ಜೋಯಿಡಾದಲ್ಲಿ 256, ದಾಂಡೇಲಿಯಲ್ಲಿ 698 ಪದವೀಧರ ಮತದಾರರ ನೋಂದಣಿಯಾಗಿದೆ.

‘2019–20ರಲ್ಲಿ ಕರಡು ಮತದಾರರ ಪಟ್ಟಿ ಪ್ರಕಟಿಸುವ ಮುನ್ನ 9,092 ಪದವೀಧರರು ಮತದಾರರಾಗಿ ನೋಂದಣಿ ಮಾಡಿಕೊಂಡಿದ್ದರು. ಈ ಬಾರಿ ಸಂಖ್ಯೆಯು ಹೆಚ್ಚಳ ಕಂಡಿದ್ದು 14,750 ಮಂದಿ ಹೆಸರು ನೋಂದಾಯಿಸಿಕೊಂಡಿದ್ದಾರೆ. ನ.25 ರಂದು ಕರಡು ಮತದಾರರ ಪಟ್ಟಿ ಪ್ರಕಟಗೊಳ್ಳಲಿದ್ದು, ಪಟ್ಟಿಗೆ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ನೀಡಲಾಗುತ್ತದೆ. ಡಿ.30 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟವಾಗಲಿದೆ’ ಎಂದು ಜಿಲ್ಲಾ ಚುನಾವಣೆ ಶಾಖೆ ತಿಳಿಸಿದೆ.

ಮುಂದಿನ ವರ್ಷದ ಜೂನ್ ವೇಳೆಗೆ ಪಶ್ಚಿಮ ಪದವೀಧರ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದ್ದು, ಡಿ.30ರ ಬಳಿಕವೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆಗೆ ಅವಕಾಶ ಇರಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.