ADVERTISEMENT

‘ಲಯನ್ಸ್ ಅತಿದೊಡ್ಡ ಸೇವಾ ಸಂಸ್ಥೆ’

ಲಯನ್ಸ್ ಕ್ಲಬ್‌ ಪದಾಧಿಕಾರಿಗಳ ಪದಗ್ರಹಣ

​ಪ್ರಜಾವಾಣಿ ವಾರ್ತೆ
Published 28 ಜೂನ್ 2022, 5:16 IST
Last Updated 28 ಜೂನ್ 2022, 5:16 IST
ದಾಂಡೇಲಿಯಲ್ಲಿ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ್ದರು
ದಾಂಡೇಲಿಯಲ್ಲಿ ಲಯನ್ಸ್ ಕ್ಲಬ್‌ನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಗಣ್ಯರು ಭಾಗವಹಿಸಿದ್ದರು   

ದಾಂಡೇಲಿ: ಜನಸೇವೆಯಲ್ಲಿ ದೇವರನ್ನು ಕಾಣುವ ಲಯನ್ಸ್ ಸಂಸ್ಥೆ ಜಗತ್ತಿನ ಅತಿದೊಡ್ಡ ಒಂದು ಸೇವಾ ಸಂಸ್ಥೆಯಾಗಿದೆ. ಸಂಸ್ಥೆಯ ಸದಸ್ಯರಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವುದು ಭಗವಂತನ ಸೇವೆ ಮಾಡಿದಂತೆ ಎಂದು ಲಯನ್ಸ್ ಜಿಲ್ಲಾ 317ಬ ದ ಪ್ರಥಮ ಉಪಪ್ರಾಂತಪಾಲ ಅರ್ಲಬ್ರಿಟೋ ಹೇಳಿದರು.

ನಗರದ ಅರಣ್ಯ ಇಲಾಖೆಯ ಹಾರ್ನ್ ಬಿಲ್ ಭವನದಲ್ಲಿ ಶನಿವಾರ ನಡೆದ 2022-23ರ ದಾಂಡೇಲಿ ಲಯನ್ಸ್ ಕ್ಲಬ್‌ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪದಗ್ರಹಣ ನೆರವೇರಿಸಿ ಮಾತನಾಡಿದರು. ಸೈಯದ್ ಇಸ್ಮಾಯಿಲ್ ತಂಗಳ ನೂತನ ಲಯನ್ಸ್ ಕ್ಲಬ್ ಅಧ್ಯಕ್ಷರಾಗಿ, ಮಾರುತಿರಾವ್ ಮಾನೆ ಕಾರ್ಯದರ್ಶಿಯಾಗಿ, ಗಜಾನನ ಕರಗಾಂವಕರ್‌ ಖಜಾಂಚಿಯಾಗಿ ಅಧಿಕಾರಿ ವಹಿಸಿಕೊಂಡರು.

ಅಂತರರಾಷ್ಟ್ರೀಯ ಕರಾಟೆಯಲ್ಲಿ ತೃತೀಯ ಬಹುಮಾನ ಪಡೆದ ದಾಂಡೇಲಿಯ ಅಶ್ವಿಜ ಅನಿಲ ದಂಡಗಲ್ ಅವರಿಗೆ ಲಯನ್ಸ್ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು. ಸಮಾಜ ಸೇವೆಯಲ್ಲಿ ಗಣನೀಯ ಸೇವೆ ಸಲ್ಲಿಸಿದ ಮಾಜಿ ಪ್ರಾಂಶುಪಾಲ, ಹಿರಿಯ ಪತ್ರಕರ್ತ ಯು.ಎಸ್ ಪಾಟೀಲ್ ರವರಿಗೆ ‘ಸಮಾಜ ಸೇವಾ ರತ್’ ಗೌರವ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ADVERTISEMENT

ನಿಕಟಪೂರ್ವ ಅಧ್ಯಕ್ಷ ನಾರಾಯಣ ಶೆಟ್ಟಿ ಸ್ವಾಗತಿಸಿದರು. ಲಾರೆನ್ಸ್ ಡಿಸೋಜಾ ವಾರ್ಷಿಕ ವರದಿ ವಾಚಿಸಿದರು. ಯು.ಎಸ್. ಪಾಟೀಲ ಮತ್ತು ಸೀಮಾ ಗುಪ್ತಾ ನಿರೂಪಿಸಿದರು. ಮಾರುತಿರಾವ ಮಾನೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.