ADVERTISEMENT

ಶಿರಸಿ: ಲೋಕಾಯುಕ್ತ ಬಲೆಗೆ ಎಫ್‍ಡಿಎ

​ಪ್ರಜಾವಾಣಿ ವಾರ್ತೆ
Published 21 ಮೇ 2025, 13:01 IST
Last Updated 21 ಮೇ 2025, 13:01 IST
<div class="paragraphs"><p>ಕರ್ನಾಟಕ ಲೋಕಾಯುಕ್ತ</p></div>

ಕರ್ನಾಟಕ ಲೋಕಾಯುಕ್ತ

   

ಶಿರಸಿ: ಇಲ್ಲಿನ ಪಂಚಾಯತ್‍ರಾಜ್ ಎಂಜಿನಿಯರಿಂಗ್ ವಿಭಾಗದ ಕಚೇರಿ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಪ್ರಥಮ ದರ್ಜೆ ಲೆಕ್ಕಾಧಿಕಾರಿಯನ್ನು (ಎಫ್‍ಡಿಎ) ಬುಧವಾರ ಬಂಧಿಸಿದ್ದಾರೆ.

ಶಿರಸಿಯ ಜಿಲ್ಲಾ ಪಂಚಾಯತ್‍ರಾಜ್ ಎಂಜಿನಿಯರಿಂಗ್ ವಿಭಾಗದ ಪ್ರಥಮ ದರ್ಜೆ ಲೆಕ್ಕಾಧಿಕಾರಿ ಸುರೇಶ ಬಿಳಗಿ ಬಂಧಿತರು.

ADVERTISEMENT

ವಿಭಾಗಕ್ಕೆ ಸಚಿನ್ ಕೋಡ್ಕಣಿ ಎಂಬುವವರು ಹೊರ ಗುತ್ತಿಗೆ ಆಧಾರದಲ್ಲಿ ಕಾರು ಬಾಡಿಗೆ ನೀಡಿದ್ದರು. ಅವರಿಗೆ 8 ತಿಂಗಳು ಬಾಡಿಗೆ ನೀಡುವುದು ಬಾಕಿ ಇತ್ತು. ಅದರಲ್ಲಿ 2 ತಿಂಗಳ ಬಾಡಿಗೆ ಹಣ ನೀಡಿ, ಉಳಿದ 6 ತಿಂಗಳ ಬಾಡಿಗೆ ಹಣ ಮಂಜೂರು ಮಾಡಲು ಶೇ 4ರಷ್ಟು ಹಣವನ್ನು ಬಿಳಗಿ ಅವರು ಲಂಚ ಕೇಳಿದ್ದರು. ಅದಕ್ಕೆ ಒಪ್ಪದ ಸಚಿನ್ ಕೋಡ್ಕಣಿ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಬುಧವಾರ ಬೆಳಿಗ್ಗೆ ಸಚಿನ‌್ ಕೊಡ್ಕಣಿ ಅವರ ಬಳಿ ಹಣ ಪಡೆಯುತ್ತಿದ್ದ ವೇಳೆ ಲೋಕಾಯುಕ್ತ ಇನ್‌ಸ್ಪೆಕ್ಟರ್ ವಿನಾಯಕ ಬಿಲ್ಲವ ನೇತೃತ್ವದಲ್ಲಿ ದಾಳಿ ನಡೆಸಿ, ಸುರೇಶ ಬಿಳಗಿ ಅವರನ್ನು ಬಂಧಿಸಿ, ಕಾನೂನು ಕ್ರಮ ಕೈಗೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.