ADVERTISEMENT

‘ಜಿಲ್ಲಾ ಆಸ್ಪತ್ರೆ ಪ್ರತ್ಯೇಕವಾಗಿ ಇರಲಿ’

​ಪ್ರಜಾವಾಣಿ ವಾರ್ತೆ
Published 12 ನವೆಂಬರ್ 2019, 16:33 IST
Last Updated 12 ನವೆಂಬರ್ 2019, 16:33 IST
ಮಾಧವ ನಾಯಕ
ಮಾಧವ ನಾಯಕ   

ಕಾರವಾರ:‘ಜಿಲ್ಲಾ ಆಸ್ಪತ್ರೆಯಲ್ಲಿಬಿ.ಪಿ.ಎಲ್ ಕಾರ್ಡ್ ಇರುವವರೂ ದುಬಾರಿ ಹಣ ಕೊಟ್ಟು ಚಿಕಿತ್ಸೆ ಪಡೆಯಬೇಕಾಗುತ್ತಿದೆ. ಇದು ಬೇಸರದಖಂಡನೀಯ. ಈಚೆಗೆ ಅಂಕೋಲಾ ಭಾಗದ ರೋಗಿಯೊಬ್ಬರಿಗೆ 10 ದಿನದ ಚಿಕಿತ್ಸೆಗೆ ₹ 20 ಸಾವಿರ ವೈದ್ಯಕೀಯ ವೆಚ್ಚ ಪಾವತಿಸಿಕೊಳ್ಳಲಾಗಿದೆ’ ಎಂದು ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ರಾಜ್ಯ ಸರ್ಕಾರದ ಸವಲತ್ತು ಕೂಡ ಸಿಗುತ್ತಿಲ್ಲ. ಜಿಲ್ಲಾ ಆಸ್ಪತ್ರೆಯು ವೈದ್ಯಕೀಯ ಕಾಲೇಜಿನಿಂದ ಪ್ರತ್ಯೇಕವಾಗಿದ್ದರೆ ಮಾತ್ರ ಬಡವರಿಗೆ ಪ್ರಯೋಜನವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ನಗರದ ವೈದ್ಯಕೀಯ ಕಾಲೇಜಿನ ವಿಸ್ತರಣೆಗೆ ಜೈಲನ್ನು ತೆರವು ಮಾಡುವುದಕ್ಕಿಂತ, ಪೊಲೀಸ್ ವರಿಷ್ಠಾಧಿಕಾರಿ ಮನೆ ಸೂಕ್ತ ಜಾಗವಾಗಿದೆ. ಅದನ್ನು ತೆರವು ಮಾಡಿ ಆಸ್ಪತ್ರೆಯ ವಿಸ್ತರಣಾ ಕಟ್ಟಡವನ್ನುನಿರ್ಮಿಸಬಹುದು. ಜಿಲ್ಲಾಧಿಕಾರಿ ನಿವಾಸದ ಕೆಳಗಿನ ಬಾಲಭವನ ಖಾಲಿಯಿದ್ದುಅಲ್ಲಿಗೂ ಸ್ಥಳಾಂತರಿಸಬಹುದು’ ಎಂದು ಅನಿಸಿಕೆ ವ್ಯಕ್ತಪಡಿಸಿದರು.

ADVERTISEMENT

‘ಮಕ್ಕಳ ತಜ್ಞರ ಕೊರತೆಯಿಂದತಾಲ್ಲೂಕಿನಲ್ಲಿ ಶಿಶುಗಳ ಮರಣ ಸಂಖ್ಯೆ ಹೆಚ್ಚಾಗುತ್ತಿದೆ. ಒಬ್ಬರೇವೈದ್ಯ 24 ಗಂಟೆಗಳ ಕಾಲ ಸತತವಾಗಿ ಕೆಲಸ ಮಾಡಲು ಸಾಧ್ಯವಿಲ್ಲ. ಶಿಶು ಮರಣ ತಪ್ಪಿಸಲು ಸರ್ಕಾರವು ಸಾವಿರಾರು ಕೋಟಿಗಳನ್ನು ಖರ್ಚು ಮಾಡಿದರೂ ಅದು ಫಲ ಕಾಣುತ್ತಿಲ್ಲ. ಸುಸಜ್ಜಿತ ಮಕ್ಕಳ ಘಟಕವಿದ್ದರೂ ಸೂಕ್ತವಾಗಿ ಬಳಕೆಯಾಗುತ್ತಿಲ್ಲ. ಇಲ್ಲಿಗೆ ಒಳ್ಳೆಯ ವೈದ್ಯರು ಬಂದರೂ ಅವರಕಾರ್ಯಕ್ಕೆ ಅಡ್ಡಿ ಮಾಡುವಹುನ್ನಾರ ನಡೆಯುತ್ತಿದೆ’ ಎಂದು ಆರೋಪಿಸಿದರು.

‘ದಾಖಲೆಗಳಲ್ಲಿಆಸ್ಪತ್ರೆಯ ಜಾಗ 21 ಎಕರೆ ಇದೆ. ಆದರೆ, ವಾಸ್ತವಿಕವಾಗಿ 17 ಎಕರೆ ಮಾತ್ರ ಕಾಣುತ್ತಿದೆ. ಹಾಗಾಗಿ ಇದನ್ನು ಸರ್ವೆ ಮಾಡಿ, ಅತಿಕ್ರಮಣ ತೆರವು ಮಾಡಬೇಕು’ ಎಂದು ಒತ್ತಾಯಿಸಿದರು.

ಪ್ರಶಸ್ತಿಸ್ವಾಗತಾರ್ಹ:ಕಾರವಾರದ ವೈದ್ಯಕೀಯ ಕಾಲೇಜಿಗೆ ‘ರಾಷ್ಟ್ರ ಗುಣಮಟ್ಟದ ಆಸ್ಪತ್ರೆ’‌ ಪ್ರಶಸ್ತಿ ಬಂದಿರುವುದು ಸಂತಸದ ಸಂಗತಿಯಾಗಿದೆ. ಜಿಲ್ಲೆಯಲ್ಲಿ ಹೆಚ್ಚಿನ ಸೌಕರ್ಯಗಳನ್ನು ಹೊಂದಿರುವ ಆಸ್ಪತ್ರೆ ಇದಾಗಿದೆ. ಆದರೆ, ವೈದ್ಯರ ಕೊರತೆಯಿಂದ ಎಷ್ಟೋ ಯಂತ್ರೋಪಕರಣಗಳು ತುಕ್ಕು ಹಿಡಿದಿವೆ. ಆಂಬುಲೆನ್ಸ್ ಉದ್ಘಾಟನೆಯಾಗಿ ಎರಡೇ ದಿನದಲ್ಲಿ ಓಡಾಟ ನಿಲ್ಲಿಸಿದೆ. ಅದರ ‘ಬ್ಯಾಟರಿ ಸರಿಇಲ್ಲ’ ಎಂದು ಹೇಳಲಾಗುತ್ತಿದೆ. ಶಾಸಕರು ಇಲ್ಲಿನ ನ್ಯೂನತೆಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಿ.ಎನ್.ನಾಯ್ಕ, ಅಲ್ತಾಫ್ ಶೇಖ್, ಫಕೀರಪ್ಪ ಭಂಡಾರಿ, ರಾಜೀವ ನಾಯ್ಕ, ಕಾಶೀನಾಥ ನಾಯ್ಕ, ಶ್ರೀಪಾದ ನಾಯ್ಕ ಇಮ್ತಿಯಾಜ್ ಬುಕಾರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.