ADVERTISEMENT

ಭಟ್ಕಳ: ಯಶ್ವಸಿಯಾಗಿ ನಡೆದ ಮಕ್ಕಳ ಸಂತೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2024, 15:27 IST
Last Updated 21 ಫೆಬ್ರುವರಿ 2024, 15:27 IST
ಮಕ್ಕಳ ಸಂತೆಯಲ್ಲಿ ಗ್ರಾಹಕರು ತರಕಾರಿ ಖರೀದಿ ಮಾಡಿದರು
ಮಕ್ಕಳ ಸಂತೆಯಲ್ಲಿ ಗ್ರಾಹಕರು ತರಕಾರಿ ಖರೀದಿ ಮಾಡಿದರು   

ಭಟ್ಕಳ: ತಾಲ್ಲೂಕಿನ ಮುಟ್ಟಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳ ಸಂತೆಯನ್ನು ಇತ್ತೀಚಿಗೆ ಏರ್ಪಡಿಸಲಾಗಿತ್ತು.

ಮಕ್ಕಳ ಸಂತೆಯಲ್ಲಿ ತರಕಾರಿಯನ್ನು ಒಳಗೊಂಡಂತೆ ವಿವಿಧ ವಸ್ತುಗಳ ಮಾರಾಟ ಮಾಡುವಲ್ಲಿನ ಮಕ್ಕಳ ಕೌಶಲ್ಯ ಜೋರಾಗಿಯೇ ಇತ್ತು. ತಾವು ಮಾರಾಟಕ್ಕಿಟ್ಟ ವಸ್ತುಗಳನ್ನು ಗ್ರಾಹಕರಿಗೆ ಮಾರಾಟ ಮಾಡುವ ಎಲ್ಲ ಕೌಶಲಗಳು ನೈಜ ಸಂತೆಯನ್ನು ಮೀರಿಸುವಂತೆ ನಡೆಯುವ ಮೂಲಕ ಮಕ್ಕಳ ಸಂತೆ ಪಾಲಕರ, ನಾಗರೀಕರ ಗಮನ ಸೆಳೆಯಲು ಯಶಸ್ವಿಯಾಯಿತು.

ಸುಮ್ಮನೆ ಕುತೂಹಲಕ್ಕೆಂದು ಬಂದ ಪಾಲಕರು, ಗ್ರಾಮದ ನಿವಾಸಿಗಳು ಬ್ಯಾಗ್ ಹಿಡಿದು ಮಕ್ಕಳೊಂದಿಗೆ ಚರ್ಚಿಸಿ ವ್ಯಾಪಾರ ಮಾಡುವ ಮೂಲಕ ವಾರದ ಸಂತೆಯನ್ನು ಮಕ್ಕಳ ಸಂತೆಯಲ್ಲೆ ಮುಗಿಸುವ ಧಾವಂತ ತೋರಿದ್ದು ವಿಶೇಷ ಆಗಿತ್ತು.

ADVERTISEMENT

ಪಂಚಾಯ್ತಿ ಅಧ್ಯಕ್ಷೆ ರಜನಿ ನಾಯ್ಕ, ಅಭಿವೃದ್ಧಿ ಅಧಿಕಾರಿ ರಾಜೇಶ್ವರಿ ಚಂದಾವರ, ಕಾರ್ಯದರ್ಶಿ ಮಂಜುನಾಥ ಚಿಕ್ಕನಮನೆ, ಸಿ.ಆರ್.ಪಿ. ಜಯಶ್ರೀ ಆಚಾರಿ, ಎಸ್.ಡಿ.ಎಂ.ಸಿ. ಅಧ್ಯಕ್ಷ ಅನಂತ ನಾಯ್ಕ, ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ಯಶೋಧಾ ನಾಯ್ಕ, ಗ್ರಾಮ ಪಂಚಾಯ್ತಿ ಮಾಜಿ ಅಧ್ಯಕ್ಷ ಶೇಷಗಿರಿ ನಾಯ್ಕ, ಮಕ್ಕಳ ಪಾಲಕ ಪೋಷಕರು, ಸೇರಿದಂತೆ ನೂರಾರು ಜನರು ಸಂತೆಯ ವಾತಾರವಣದಲ್ಲಿ ಮಕ್ಕಳನ್ನು ನೋಡಿ ಸಂತಸಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.