ADVERTISEMENT

ಕಾರವಾರ:ಮಾಸ್ಕ್‌ನಲ್ಲಿ ಚಿನ್ನ ಸಾಗಣೆ, ಭಟ್ಕಳದ ವ್ಯಕ್ತಿ ಬಂಧನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2020, 16:51 IST
Last Updated 30 ಸೆಪ್ಟೆಂಬರ್ 2020, 16:51 IST

ಕಾರವಾರ: ಎನ್ 95 ಮುಖಗವಸಿನಲ್ಲಿ 40 ಗ್ರಾಂ ಚಿನ್ನ ಸಾಗಿಸಲು ಯತ್ನಿಸಿದ್ದ ಭಟ್ಕಳದ ವ್ಯಕ್ತಿಯೊಬ್ಬರನ್ನು ಕೇರಳದ ಕೋಝಿಕ್ಕೋಡ್‌ನ ಕರಿಪುರ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್ ಅಧಿಕಾರಿಗಳು ಮಂಗಳವಾರ ಬಂಧಿಸಿದ್ದಾರೆ.

ಬಂಧಿತನನ್ನು ಭಟ್ಕಳದ ಅಮರ್ ಎಂದು ಗುರುತಿಸಲಾಗಿದೆ. ದುಬೈನಿಂದ ಬಂದಿದ್ದ ಆತ, ಮುಖಗವಸಿನ ಒಳಭಾಗದಲ್ಲಿ ಚಿನ್ನದ ಗಟ್ಟಿಯನ್ನು ಇಟ್ಟುಕೊಂಡಿದ್ದ. ದುಬೈನಲ್ಲಿ ಅಧಿಕಾರಿಗಳ ಕಣ್ಣು ತಪ್ಪಿಸುವಲ್ಲಿ ಯಶಸ್ವಿಯಾದರೂ ಕಲ್ಲಿಕೋಟೆಯಲ್ಲಿ ತಪಾಸಣೆ ನಡೆಸುವಾಗ ಸಿಕ್ಕಿಬಿದ್ದ. ಜಪ್ತಿ ಮಾಡಲಾದ ಚಿನ್ನವು ಸುಮಾರು ₹ 2 ಲಕ್ಷ ಮೌಲ್ಯದ್ದಾಗಿದೆ ಎಂದು ಅಂದಾಜಿಸಲಾಗಿದೆ ಎಂದು ಸ್ಥಳೀಯ ಆಂಗ್ಲ ಪತ್ರಿಕೆಗಳು ವರದಿ ಮಾಡಿವೆ.

ಈ ಬಗ್ಗೆ ಕೇಂದ್ರ ‘ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿ’ಯು (ಸಿ.ಬಿ.ಐ.ಸಿ) ವಿಡಿಯೊ ತುಣುಕನ್ನು ತನ್ನ ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.