ADVERTISEMENT

ಒಂದು ಸಾವಿರ ಜನರಿಗೆ ಕಿಟ್ ವಿತರಣೆ

ತಲಾ ಎಂಟು ಕೆ.ಜಿ. ಅಕ್ಕಿ, ಒಂದು ಕೆ.ಜಿ. ಬೇಳೆ, ಉಪ್ಪು , ತರಕಾರಿಯುಳ್ಳ ಕಿಟ್‌

​ಪ್ರಜಾವಾಣಿ ವಾರ್ತೆ
Published 5 ಏಪ್ರಿಲ್ 2020, 13:13 IST
Last Updated 5 ಏಪ್ರಿಲ್ 2020, 13:13 IST
ಜೀವನೋಪಾಯ ಸಾಮಗ್ರಿಯುಳ್ಳ ಕಿಟ್‌ಗಳನ್ನು ಶಾಸಕಿ ರೂಪಾಲಿ ನಾಯ್ಕ ಭಾನುವಾರ ವಿತರಿಸಿದರು
ಜೀವನೋಪಾಯ ಸಾಮಗ್ರಿಯುಳ್ಳ ಕಿಟ್‌ಗಳನ್ನು ಶಾಸಕಿ ರೂಪಾಲಿ ನಾಯ್ಕ ಭಾನುವಾರ ವಿತರಿಸಿದರು   

ಕಾರವಾರ: ಲಾಕ್‌ಡೌನ್ ಅವಧಿಯಲ್ಲಿ ಅಗತ್ಯ ವಸ್ತುಗಳು ಸಿಗದೇ ಸಮಸ್ಯೆಯಾದ ಒಂದು ಸಾವಿರ ಜನರಿಗೆ ಶಾಸಕಿ ರೂಪಾಲಿ ನಾಯ್ಕ ಜೀವನೋಪಾಯದ ಸಾಮಗ್ರಿಯ ಕಿಟ್‌ಗಳನ್ನು ಭಾನುವಾರ ವಿತರಿಸಿದರು.

ಆಟೊ, ಟೆಂಪೊಚಾಲಕರು, ಇದುವರೆಗೆ ಪಡಿತರ ಚೀಟಿ ಹೊಂದಿರದವರು ಸಮಸ್ಯೆ ಅನುಭವಿಸುತ್ತಿದ್ದಾರೆ. ಕಾರವಾರ–ಅಂಕೋಲಾ ವಿಧಾನಸಭಾ ಕ್ಷೇತ್ರದಲ್ಲಿರುವ ಅಂಥ ಕುಟುಂಬಗಳನ್ನು ಗುರುತಿಸಿ ಕಿಟ್‌ಗಳನ್ನು ಹಸ್ತಾಂತರಿಸಿದರು. ತಲಾ ಎಂಟು ಕೆ.ಜಿ. ಅಕ್ಕಿ, ಒಂದು ಕೆ.ಜಿ. ಬೇಳೆ, ತರಕಾರಿ, ಉಪ್ಪು ಕಿಟ್‌ನಲ್ಲಿವೆ.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಕೊರೊನಾ ವೈರಸ್ ವಿರುದ್ಧ ಹೋರಾಟದ ಅಂಗವಾಗಿ ಲಾಕ್‌ಡೌನ್ ಘೋಷಿಸಲಾಗಿದೆ. ಈ ಅವಧಿಯಲ್ಲಿ ಜನರಿಗೆ ಅಗತ್ಯ ಸಾಮಗ್ರಿಗಳನ್ನು ಅವರ ಮನೆಗೇ ತಲುಪಿಸಲಾಗುತ್ತಿದೆ. ಜಿಲ್ಲಾಡಳಿತ, ಪೊಲೀಸ್ ಇಲಾಖೆ ವೈದ್ಯಕೀಯ ಇಲಾಖೆಯು ಸಾರ್ವಜನಿಕರ ಸುರಕ್ಷತೆಗೆ ಶ್ರಮಿಸುತ್ತಿವೆ. ಇಂಥ ಸಂದರ್ಭದಲ್ಲಿ ನಮ್ಮ ಕೈಲಾದಷ್ಟು ಸಹಾಯ ಮಾಡುವುದು ಅವಶ್ಯಕವಾಗಿದೆ’ ಎಂದು ಹೇಳಿದರು.

ADVERTISEMENT

‘ದಿನಗೂಲಿ, ದಿನದ ಆದಾಯವನ್ನೇ ನಂಬಿರುವವರಿಗೆಈಗ ಆದಾಯವಿಲ್ಲವಾಗಿದೆ. ಅಂಥ ಸುಮಾರು 10 ಸಾವಿರ ಜನರಿಗೆ ಪರಿಸ್ಥಿತಿ ಸುಧಾರಿಸುವವರೆಗೆ ಸಾಧ್ಯವಾದಷ್ಟು ಸಹಾಯ ಮಾಡಬೇಕಿದೆ’ ಎಂದರು.

₹ 50 ಲಕ್ಷ ದೇಣಿಗೆ:ಕೊರೊನಾ ವೈರಸ್ ನಿಯಂತ್ರಣಸಂಬಂಧ ರಾಜ್ಯ ಸರ್ಕಾರದ ನಿಧಿಗೆ ಶಾಸಕಿ ರೂಪಾಲಿ ನಾಯ್ಕಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿಯ ₹ 50 ಲಕ್ಷವನ್ನು ದೇಣಿಗೆಯಾಗಿ ನೀಡಿದ್ದಾರೆ.

‘ವೈದ್ಯಕೀಯ ಸೌಲಭ್ಯಗಳು, ಐಸೋಲೇಶನ್ ವಾರ್ಡ್‌ಗಳು, ತುರ್ತು ನಿಗಾ ಘಟಕಗಳಿಗೆಬೇಡಿಕೆ ಹೆಚ್ಚಿದೆ.ಅವುಗಳನ್ನು ಒದಗಿಸಲು ಹೆಚ್ಚಿನ ಹಣದ ಅವಶ್ಯಕತೆ ಇದೆ. ಕೇಂದ್ರ ಸರ್ಕಾರದ ಅಧಿಸೂಚನೆಯಂತೆ ಅವರು ದೇಣಿಗೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.