ADVERTISEMENT

ಎಂಡೊಸಲ್ಫಾನ್ ಪೀಡಿತರಿಗೆ ಆರೋಗ್ಯ ಸೇವೆ

ಸಂಚಾರಿ ಆರೋಗ್ಯ ಘಟಕಗಳ ಸೇವೆ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2018, 14:24 IST
Last Updated 16 ಅಕ್ಟೋಬರ್ 2018, 14:24 IST
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿನೋದ ಭೂತೆಅವರು ಸಂಚಾರಿ ಆರೋಗ್ಯ ಸೇವೆ ಘಟಕಗಳನ್ನು ಪರಿಶೀಲಿಸಿದರು
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿನೋದ ಭೂತೆಅವರು ಸಂಚಾರಿ ಆರೋಗ್ಯ ಸೇವೆ ಘಟಕಗಳನ್ನು ಪರಿಶೀಲಿಸಿದರು   

ಶಿರಸಿ: ಎಂಡೊಸಲ್ಫಾನ್ ಸಂತ್ರಸ್ತರ ಆರೋಗ್ಯ ಸುಧಾರಣೆಗಾಗಿ ಸಂಚಾರಿ ಆರೋಗ್ಯ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ವಿನೋದ ಭೂತೆ ತಿಳಿಸಿದರು.

ಮಂಗಳವಾರ ಶಿರಸಿ, ಸಿದ್ದಾಪುರ ಭಾಗದ ಎಂಡೊಸಲ್ಫಾನ್ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ, ಸಂಚಾರಿ ಆರೋಗ್ಯ ಘಟಕಗಳ ಸೇವೆ ಮೇಲ್ವಿಚಾರಣೆ ನಡೆಸಿದ ಸಂದರ್ಭದಲ್ಲಿ ಅವರು ಮಾತನಾಡಿದರು. ‘ಎಂಡೊಸಲ್ಫಾನ್ ಪೀಡಿತರನ್ನು ಮೂರು ರೀತಿಯಲ್ಲಿ ವರ್ಗೀಕರಿಸಿ, ಮೊದಲ ಹಾಗೂ ಎರಡನೇ ವರ್ಗದವರಿಗೆ ಫಿಸಿಯೋಥೆರಪಿ ಚಿಕಿತ್ಸೆ ನೀಡುವ ಮೂಲಕ ಅವರು ತಮ್ಮ ಕೆಲಸ ನಿಭಾಯಿಸುವಷ್ಟರ ಮಟ್ಟಿಗೆ ಸ್ವತಂತ್ರಗೊಳಿಸುವುದು ನಮ್ಮ ಉದ್ದೇಶವಾಗಿದೆ. ಸ್ಕೊಡ್‌ವೆಸ್ ಉತ್ತಮ ಸೇವೆ ನೀಡುತ್ತಿದೆ’ ಎಂದರು.

ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿ ಡಾ. ಶಂಕರರಾವ್ ಮಾತನಾಡಿ, ‘ಸಂಚಾರಿ ಆರೋಗ್ಯ ಸೇವೆ ಸಂಬಂಧ ಅಗತ್ಯವಿದ್ದಲ್ಲಿ ಸೇವಾ ವಿಧಾನದಲ್ಲಿ ಬದಲಾವಣೆ ತರಲಾಗುವುದು’ ಎಂದರು.

ADVERTISEMENT

ಸ್ಕೊಡ್‌ವೆಸ್‌ ಸಂಸ್ಥೆಯ ಸಮನ್ವಯಾಧಿಕಾರಿ ಜಿತೇಂದ್ರ ಕುಮಾರ, ಸಂಚಾರಿ ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ. ಪ್ರಭಾಶಂಕರ ಹೆಗಡೆ, ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.