
ಪ್ರಜಾವಾಣಿ ವಾರ್ತೆ
ಸಾಂದರ್ಭಿಕ ಚಿತ್ರ
ಕಾರವಾರ: ಇಲ್ಲಿನ ಬೈತಕೋಲಕ್ಕೆ ಸಮೀಪದ ಕುರಸಿ ಬೀಚ್ ಬಳಿ ಚಿಪ್ಪಿಕಲ್ಲು ಆರಿಸಲು ತೆರಳಿದ್ದ ತಾಯಿ ಮತ್ತು ಮಗಳು ಸಮುದ್ರದ ಅಲೆಗೆ ಸಿಲುಕಿ ಬುಧವಾರ ಮೃತಪಟ್ಟಿದ್ದಾರೆ.
ಬೈತಕೋಲದ ನಿವಾಸಿಗಳಾದ ರೇಣುಕಾ ಗೌಡ (50) ಮತ್ತು ಅವರ ಪುತ್ರಿ ಸುಜಾತಾ ಶರಾನ್ಯಾ (32) ಮೃತರು. ‘ಚಿಪ್ಪಿಕಲ್ಲು ಆರಿಸುವ ವೇಳೆ ರಭಸದಿಂದ ಅಲೆ ಬಡಿದು ಇಬ್ಬರೂ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರ ಮೃತದೇಹವೂ ಬೈತಕೋಲದ ಅಲೆತಡೆಗೋಡೆ ಬಳಿ ದೊರೆತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.