ಭಟ್ಕಳ: ಭಟ್ಕಳ ಪುರಸಭೆಯ ಘನತ್ಯಾಜ್ಯ ಘಟಕದಲ್ಲಿ ಕಸದ ಮರುಬಳಕೆಗಾಗಿ ಅಳವಡಿಸಿದ್ದ ಥರ್ಮಲ್ ಸ್ಕ್ಯಾನರ್ ಯಂತ್ರವನ್ನು ದುರಸ್ತಿ ಮಾಡಲಾಗಿದ ಎಂದು ಪುರಸಭೆಯ ಆರೋಗ್ಯಾಧಿಕಾರಿ ಸೋಜಿಯಾ ಸೋಮನ್ ತಿಳಿಸಿದ್ದಾರೆ.
ಪುರಸಭೆ ಘನತ್ಯಾಜ್ಯ ಘಟಕದಲ್ಲಿ ಹಾಕುವ ಕಸವನ್ನು ಮರಬಳಕೆಗಾಗಿ ವಿಂಗಡಿಸಿ ಅದರಿಂದ ಗೊಬ್ಬರ ಉತ್ಪಾದಿಸಿ ಮಾರಾಟ ಮಾಡಲು ₹50 ಲಕ್ಷ ಮೊತ್ತದ ಥರ್ಮಲ್ ಸ್ಕ್ಯಾನರ್ ಯಂತ್ರವನ್ನು 2023ರ ಮಾರ್ಚ್‌ನಲ್ಲಿ ಖರೀದಿಸಿ ಅಳವಡಿಸಲಾಗಿತ್ತು. ಯಂತ್ರ ಅಳವಡಿಸಿ ಒಂದು ತಿಂಗಳಿನಲ್ಲಿಯೇ ಯಂತ್ರ ಹಾಳಾಗಿ ಕಾರ್ಯಸ್ಥಗಿತಗೊಳಿಸಲಾಗಿತ್ತು.
ಈ ಕುರಿತು ‘ಪ್ರಜಾವಾಣಿ’ ಜ.4ರಂದು ವಿಶೇಷ ವರದಿ ಪ್ರಕಟಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.