ADVERTISEMENT

ಕಾರವಾರ: ಒಂದೇ ದಿನ ಒಂಬತ್ತು ಮಂದಿಗೆ ಕೋವಿಡ್

10 ಮಂದಿ ಗುಣಮುಖ: ಆಸ್ಪತ್ರೆಯಿಂದ ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2020, 14:27 IST
Last Updated 24 ಜೂನ್ 2020, 14:27 IST
ಕೊರೊನಾ ವೈರಸ್ (ಸಾಂದರ್ಭಿಕ ಚಿತ್ರ)
ಕೊರೊನಾ ವೈರಸ್ (ಸಾಂದರ್ಭಿಕ ಚಿತ್ರ)   

ಕಾರವಾರ: ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ ಒಂಬತ್ತು ಮಂದಿಗೆ ಕೋವಿಡ್ 19 ದೃಢಪಟ್ಟಿದೆ. ಅವರ ಪೈಕಿಏಳುಮಂದಿ ಮಹಾರಾಷ್ಟ್ರದ ವಿವಿಧ ಊರುಗಳಿಂದ ಮರಳಿದವರು. ಒಬ್ಬರು ಧಾರವಾಡದಿಂದವಾಪಸ್ಸಾಗಿದ್ದರೆ, ಮತ್ತೊಬ್ಬರು ಈಗಾಗಲೇ ಸೋಂಕಿತರೊಬ್ಬರ ಪ್ರಾಥಮಿಕ ಸಂಪರ್ಕಕ್ಕೆ ಬಂದವರಾಗಿದ್ದಾರೆ.

ಎಲ್ಲರೂ ಕುಮಟಾ, ಹೊನ್ನಾವರ ಮತ್ತು ಮುಂಡಗೋಡ ತಾಲ್ಲೂಕಿನವರಾಗಿದ್ದು, ಕ್ವಾರಂಟೈನ್‌ನಲ್ಲಿದ್ದರು. ಇವರಲ್ಲಿ ಕುಮಟಾ ತಾಲ್ಲೂಕಿನ 24 ವರ್ಷ, 28 ವರ್ಷದ ಯುವತಿಯರು, 42 ಹಾಗೂ 56 ವರ್ಷದ ಪುರುಷರು ಸೇರಿದ್ದಾರೆ. ಮುಂಡಗೋಡದ ಟಿಬೆಟನ್ ಕಾಲೊನಿಯಲ್ಲಿ ಸೋಂಕಿತರ ಪ್ರಾಥಮಿಕ ಸಂಪರ್ಕಕ್ಕೆ ಬಂದ 45 ವರ್ಷದ ಮಹಿಳೆಗೆ, ಹೊನ್ನಾವರ ತಾಲ್ಲೂಕಿನವರಾದ 42 ವರ್ಷ, 67 ವರ್ಷದ ಮಹಿಳೆಯರು, 78 ವರ್ಷದ ಹಿರಿಯ ವ್ಯಕ್ತಿ ಹಾಗೂ 33 ವರ್ಷದ ಮಹಿಳೆಗೂ ಸೋಂಕು ಖಚಿತವಾಗಿದೆ.

ಪ್ರಸ್ತುತ ಜಿಲ್ಲೆಯಲ್ಲಿ 34 ಸಕ್ರಿಯ ಪ್ರಕರಣಗಳಿದ್ದು, 122 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 156 ಜನರಿಗೆ ಸೋಂಕು ಕಾಣಿಸಿಕೊಂಡಿದೆ.

ADVERTISEMENT

10 ಮಂದಿ ಗುಣಮುಖ:ಕೋವಿಡ್ 19ನಿಂದ 10 ಮಂದಿ ಗುಣಮುಖರಾಗಿದ್ದು, ಇಲ್ಲಿನ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ ಕೋವಿಡ್ ವಾರ್ಡ್‌ನಿಂದ ಬುಧವಾರ ಬಿಡುಗಡೆ ಮಾಡಲಾಯಿತು. ಅವರಲ್ಲಿ ಆರು ಮಂದಿ ಪುರುಷರು ಮತ್ತು ನಾಲ್ವರು ಮಹಿಳೆಯರಿದ್ದಾರೆ.

ಕಾರವಾರ ತಾಲ್ಲೂಕಿನ ಸದಾಶಿವಗಡದ 39 ವರ್ಷದ ಪುರುಷ ಹಾಗೂ35 ವರ್ಷದ ಮಹಿಳೆ, ಹೊನ್ನಾವರದ 36 ವರ್ಷದಪುರುಷ, ಭಟ್ಕಳದ 43 ವರ್ಷದ ಪುರುಷ, ಮುಂಡಗೋಡದ 30 ವರ್ಷದ ಮಹಿಳೆ, ಕಾರವಾರದ 52 ವರ್ಷದ ಮಹಿಳೆ, ಯಲ್ಲಾಪುರದವರಾದ 33, 46 ಹಾಗೂ 49 ವರ್ಷದ ಪುರುಷರು, ಅಂಕೋಲಾದ 30 ವರ್ಷದ ಮಹಿಳೆ ಗುಣಮುಖರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.