ADVERTISEMENT

ಶಿರಸಿ: ಮರು ನಿರ್ಮಾಣವಾಗದ ಹಾಸ್ಟೆಲ್ ಆವರಣಗೋಡೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2022, 15:54 IST
Last Updated 5 ಆಗಸ್ಟ್ 2022, 15:54 IST
ಆವರಣ ಗೋಡೆ ಇಲ್ಲದ ಶಿರಸಿಯ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯ
ಆವರಣ ಗೋಡೆ ಇಲ್ಲದ ಶಿರಸಿಯ ಮೆಟ್ರಿಕ್ ನಂತರದ ವೃತ್ತಿಪರ ಬಾಲಕರ ವಸತಿ ನಿಲಯ   

ಶಿರಸಿ: ಇಲ್ಲಿನ ಯಲ್ಲಾಪುರ ನಾಕಾದಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರ ವೃತ್ತಿಪರಬಾಲಕರವಸತಿನಿಲಯಕ್ಕೆ ಆವರಣಗೋಡೆ ಇಲ್ಲದೆ ವರ್ಷ ಕಳೆದಿದೆ.ಮರುನಿರ್ಮಾಣಗೊಳ್ಳದಕಾರಣಸುರಕ್ಷತೆಯಆತಂಕಕಾಡಿದೆ.

ರಸ್ತೆ ವಿಸ್ತರಣೆ ಸಂಬಂಧ ಆವರಣಗೋಡೆಯ ತೆರವು ಕಾರ್ಯ ಕೆಲವು ತಿಂಗಳ ಹಿಂದೆ ನಡೆದಿತ್ತು. ಶಿರಸಿ–ಯಲ್ಲಾಪುರ ರಸ್ತೆಯ ಬದಿಯಲ್ಲಿದ್ದ ಗೋಡೆಯನ್ನು ಕೆಡವಿ ಹಲವು ತಿಂಗಳಾದರೂ ಅದನ್ನು ಮರು ನಿರ್ಮಿಸಲು ಇಲಾಖೆ ಮುಂದಾಗಿಲ್ಲ.

ನಗರದ ವಿವಿಧ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ನೂರಾರು ವಿದ್ಯಾರ್ಥಿಗಳು ಈ ವಸತಿ ನಿಲಯದಲ್ಲಿ ವಾಸವಿದ್ದಾರೆ. ಮುಖ್ಯ ರಸ್ತೆಯ ಪಕ್ಕದಲ್ಲೇ ಕಟ್ಟಡವಿದ್ದು, ಆವರಣಗೋಡೆ ಇಲ್ಲದ ಕಾರಣ ಅಪರಿಚಿತರು ಆವರಣದೊಳಗೆ ನುಗ್ಗುತ್ತಿರುವ ಘಟನೆಗಳು ನಡೆಯುತ್ತಿವೆ. ಅಲ್ಲದೆ ವಿದ್ಯುತ್ ಪರಿವರ್ತಕವನ್ನೂ ಇಲ್ಲಿ ಅಳವಡಿಸಲಾಗಿದ್ದು ಆತಂಕ ಉಂಟು ಮಾಡಿದೆ.

ADVERTISEMENT

‘ಆವರಣಗೋಡೆ ಇಲ್ಲದ ಕಾರಣ ಜಾನುವಾರುಗಳು ಆವರಣದೊಳಗೆ ನುಗ್ಗಿ ಗಿಡಗಳನ್ನು ಹಾಳು ಮಾಡುತ್ತಿವೆ. ಅಲ್ಲದೆ ಕಳ್ಳರು ಕಟ್ಟಡದೊಳಗೆ ನುಗ್ಗುವ ಆತಂಕವೂ ಕಾಡುತ್ತಿದೆ’ ಎನ್ನುತ್ತಾರೆ ಇಲ್ಲಿರುವ ವಿದ್ಯಾರ್ಥಿಗಳು.

‘ವಸತಿ ನಿಲಯಕ್ಕೆ ಹೊಸದಾಗಿ ಆವರಣಗೋಡೆ ನಿರ್ಮಿಸುವ ಸಂಬಂಧ ಕ್ರಿಯಾಯೋಜನೆ ಸಿದ್ಧಪಡಿಸಿ, ಹಿರಿಯ ಅಧಿಕಾರಿಗಳಿಗೆ ಪ್ರಸ್ತಾವ ಸಲ್ಲಿಸಲಾಗಿದೆ. ಮಂಜೂರಾತಿ ದೊರೆತ ಬಳಿಕ ನಿರ್ಮಾಣ ಕಾರ್ಯ ನಡೆಯಲಿದೆ’ ಎಂದು ಸಮಾಜ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.