ADVERTISEMENT

ಕಾರವಾರ | ಬಾಂಬ್ ಬೆದರಿಕೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಜುಲೈ 2025, 23:46 IST
Last Updated 14 ಜುಲೈ 2025, 23:46 IST
<div class="paragraphs"><p>ಬಂಧನ</p></div>

ಬಂಧನ

   

(ಪ್ರಾತಿನಿಧಿಕ ಚಿತ್ರ)

ಕಾರವಾರ: ಭಟ್ಕಳದಲ್ಲಿ ಬಾಂಬ್ ಸ್ಫೋಟಿಸುವ ಬೆದರಿಕೆಯ ಇ–ಮೇಲ್  ರವಾನಿಸಿದ್ದ ಆರೋಪದಡಿ ದೆಹಲಿಯ ನಿತಿನ್ ಶರ್ಮಾ ಮತ್ತು ತಮಿಳುನಾಡಿನ ತಿರುಮಲಪುರಮ್‍ನ ಕಣ್ಣನ್ ಗುರು ಸ್ವಾಮಿ ಎಂಬುವರನ್ನು ಭಟ್ಕಳ ಠಾಣೆ ಪೊಲೀಸರು ಬಂಧಿಸಿದ್ದಾರೆ.

ADVERTISEMENT

‘ಕಣ್ಣನ್ ಇ–ಮೇಲ್‌‍ ಖಾತೆಯಿಂದ ಜುಲೈ 10 ರಂದು ಇ–ಮೇಲ್‌ ಬಂದಿತ್ತು. ವಿಚಾರಣೆ ವೇಳೆ, ಕೇರಳದ ಮುನ್ನಾರ್ ಪೊಲೀಸ್ ಠಾಣೆಗೆ ಪ್ರಕರಣವೊಂದರ ಸಂಬಂಧ ಹೋಗಿದ್ದಾಗ ಕೈದಿಯೊಬ್ಬನ ಫೋನ್ ಪಡೆದು ಸಂದೇಶ ಕಳಿಸಿದ್ದಾಗಿ ತಿಳಿಸಿದ. ನಿತಿನ್ ಶರ್ಮಾ ಇ–ಮೇಲ್ ಕಳಿಸಿದ್ದು ದೃಢಪಟ್ಟಿದೆ. ಆತನ ವಿರುದ್ದ ವಿವಿಧೆಡೆ16 ಪ್ರಕರಣ ದಾಖಲಾಗಿವೆ.’ ಎಂದು ಎಸ್‌ಪಿ ಎಂ.ನಾರಾಯಣ ತಿಳಿಸಿದರು. ‘ನಿತಿನ್ ಶರ್ಮಾ, ಮೈಸೂರು ಜೈಲಿನಲ್ಲಿದ್ದು, ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.