ADVERTISEMENT

‘ಪೌರ ಕಾರ್ಮಿಕ ಮೃತಪಟ್ಟರೆ ಇನ್ನುಮುಂದೆ ಅಧಿಕಾರಿಗಳೇ ನೇರ ಹೊಣೆ’

ಶೌಚ ಗುಂಡಿ ಸ್ವಚ್ಛಗೊಳಿಸುವ ಪೌರ ಕಾರ್ಮಿಕ ಸಾವು ಪ್ರಕರಣ: ಜಗದೀಶ ಹಿರೇಮನಿ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 12:54 IST
Last Updated 26 ಆಗಸ್ಟ್ 2019, 12:54 IST
ಕಾರವಾರದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಸಭೆಯಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಅಭಿಯಾನದ ಸದಸ್ಯ ಜಗದೀಶ ಹಿರೇಮನಿ ಮಾತನಾಡಿದರು. ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ.ಡಿ, ಜಿ.ಪಂ. ಸಿಇಒ ಮೊಹಮ್ಮದ್ ರೋಶನ್ ಚಿತ್ರದಲ್ಲಿದ್ದಾರೆ.
ಕಾರವಾರದಲ್ಲಿ ಸೋಮವಾರ ಹಮ್ಮಿಕೊಳ್ಳಲಾದ ಸಭೆಯಲ್ಲಿ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಅಭಿಯಾನದ ಸದಸ್ಯ ಜಗದೀಶ ಹಿರೇಮನಿ ಮಾತನಾಡಿದರು. ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ.ಡಿ, ಜಿ.ಪಂ. ಸಿಇಒ ಮೊಹಮ್ಮದ್ ರೋಶನ್ ಚಿತ್ರದಲ್ಲಿದ್ದಾರೆ.   

ಕಾರವಾರ: ಇನ್ನುಮುಂದೆ ಶೌಚ ಗುಂಡಿ ಸ್ವಚ್ಛಗೊಳಿಸುವಾಗ ಪೌರ ಕಾರ್ಮಿಕರು ಮೃತಪಟ್ಟರೆ ಅಧಿಕಾರಿಗಳನ್ನೇ ನೇರ ಹೊಣೆ ಮಾಡಲಾಗುವುದು. ಇಂತಹ ಪ್ರಕರಣಗಳು ಯಾವುದೇ ಕಾರಣಕ್ಕೂ ಮರುಕಳಿಸಬಾರದು ಎಂದುರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಜಗದೀಶ ಹಿರೇಮನಿ ಎಚ್ಚರಿಕೆ ನೀಡಿದರು.

ನಗರದಲ್ಲಿ ಸೋಮವಾರ ಸ್ಥಳೀಯ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರುಮಾತನಾಡಿದರು.

ನಗರದಲ್ಲಿ ಈಚೆಗೆ ಖಾಸಗಿ ಕಟ್ಟಡದ ಶೌಚಾಲಯ ಗುಂಡಿ ಸ್ವಚ್ಛಗೊಳಿಸುವಾಗ ಪೌರಕಾರ್ಮಿಕ ಕೋಟಯ್ಯ ಪೆದ್ದಬಾಲಯ್ಯ ಬುನಾದಿ ಮೃತಪಟ್ಟಿರುವುದು ವಿಷಾದನೀಯವಾಗಿದೆ.ಮಲ ಹೊರುವ ಪದ್ಧತಿಯನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದ್ದರೂ ಚಾಲ್ತಿಯಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ಶೌಚಾಲಯ ಗುಂಡಿ ಸ್ವಚ್ಛಗೊಳಿಸಲು ಪೌರಕಾರ್ಮಿಕ ನೇರವಾಗಿ ಇಳಿಯಬಾರದು. ಈ ಕಾರ್ಯಕ್ಕೆಜೆಟ್ಟಿಂಗ್ ಮಷಿನ್‍ಗಳನ್ನೇ ಬಳಸಬೇಕು. ಇದಕ್ಕೆ ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಇರುವ ಕರಪತ್ರಗಳನ್ನು ಮನೆಮನೆಗಳಿಗೆ ಹಂಚಬೇಕು’ ಎಂದು ತಿಳಿಸಿದರು.

2022ರ ಒಳಗಾಗಿ ಪೌರ ಕಾರ್ಮಿಕರಿಗೆಸಮಾನ ಕೆಲಸಕ್ಕೆ ಸಮಾನ ವೇತನ, ಆರೋಗ್ಯ ಸೇವೆ, ಸ್ವಂತ ಮನೆ ನಿರ್ಮಾಣ ಹಾಗೂ ಮಕ್ಕಳಿಗೆ ಶಿಕ್ಷಣ ಒದಗಿಸುವ ಉದ್ದೇಶವಿದೆ. ಈ ಹಿನ್ನೆಲೆಯಲ್ಲಿ ಅವರ ಅವಲಂಬಿತರಿಗೆ ಸ್ವಯಂ ಉದ್ಯೋಗ ಕೈಗೊಳ್ಳಲು ₹ 25 ಲಕ್ಷವರೆಗೆ ಸಾಲನೀಡಲಾಗುವುದು’ ಎಂದು ಮಾಹಿತಿ ನೀಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಕೆ.ಹರೀಶಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಾಹಣಾಅಧಿಕಾರಿ ಮೊಹಮ್ಮದ್ ರೋಶನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ ದೇವರಾಜ, ಪೌರಾಯುಕ್ತ ಎಸ್.ಯೋಗೇಶ್ವರ, ಉಪವಿಭಾಗಾಧಿಕಾರಿ ಅಭಿಜಿನ್ ಇದ್ದರು.

20 ದಿನಗಳ ವೈದ್ಯಕೀಯ ರಜೆ ಪಡೆದಿದ್ದ ನಗರಸಭೆಯ ಪೌರಕಾರ್ಮಿಕ ಬಿ.ಕೋಟಯ್ಯಅವರ ಮೃತದೇಹವು ಆ.18ರಂದು ನಗರದ ‘ಅಭಿಮಾನ ಶ್ರೀ’ಅಪಾರ್ಟ್‌ಮೆಂಟ್‌ ಆವರಣದಲ್ಲಿ ಪತ್ತೆಯಾಗಿತ್ತು. ಈ ಸಂಬಂಧನಗರ ಪೊಲೀಸ್ ಠಾಣೆಯಲ್ಲಿದೂರುದಾಖಲಾಗಿತ್ತು.

‘ಮತ್ತಿಬ್ಬರವಿರುದ್ಧಪ್ರಕರಣ ದಾಖಲಿಸಿ’: ‘ಕೋಟಯ್ಯ ಅವರ ಸಾವಿಗೆ ಸಂಬಂಧಿಸಿದಂತೆ ಅನಂತ ಶೆಟ್ಟಿ ಎಂಬುವವರನ್ನು ಬಂಧಿಸಲಾಗಿದೆ. ಅವರು ದೂರವಾಣಿ ಕರೆ ಮಾಡಿ ಅಪಾರ್ಟ್‌ಮೆಂಟ್‌ಗೆ ಕರೆಸಿಕೊಂಡಿದ್ದರು. ಇದೇರೀತಿ, ಕೋಟಯ್ಯ ಅವರ ಜೊತೆ ಕೆಲಸಕ್ಕೆ ಹೋಗಿದ್ದ ಮತ್ತಿಬ್ಬರು ಪೌರ ಕಾರ್ಮಿಕರ ವಿರುದ್ಧವೂಪ್ರಕರಣ ದಾಖಲಿಸಲು ಸೂಚಿಸಲಾಗಿದೆ’ ಎಂದುಜಗದೀಶ ಹಿರೇಮನಿ ಹೇಳಿದರು.

ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಶೌಚಗುಂಡಿಯನ್ನು ಸ್ವಚ್ಛಗೊಳಿಸಲು ಬರಿಗೈಯಿಂದ ಹೋಗಿದ್ದೇ ತಪ್ಪು. ಅವರು ಕಡ್ಡಾಯವಾಗಿಯಂತ್ರಗಳನ್ನು ತೆಗೆದುಕೊಂಡು ಹೋಗಬೇಕಿತ್ತು.ಈ ನಿಟ್ಟಿನಲ್ಲಿ ಅವರಿಗೆ ತರಬೇತಿ ಕೂಡ ಇರಲಿಲ್ಲ’ ಎಂದು ತಿಳಿಸಿದರು.

‘ಮಲಿನ ನೀರು ಶುದ್ಧೀಕರಣ ಘಟಕ ಸ್ಥಾಪಿಸುವುದಾದರೆ ಮಾತ್ರ10ಕ್ಕಿಂತ ಹೆಚ್ಚಿನ ಮನೆಗಳು ಇರುವ ಕಟ್ಟಡದ ನಿರ್ಮಾಣಕ್ಕೆ ಅನುಮತಿ ನೀಡಬೇಕು. ದೊಡ್ಡ ಬಂಗಲೆಗಳು, ಕಟ್ಟಡಗಳ ಸಮೀಕ್ಷೆ ಮಾಡಿ ಪಟ್ಟಿ ಮಾಡುವಂತೆಯೂ ಸೂಚಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.