ADVERTISEMENT

ಕರೂರಿಗೆ ಅಧಿಕಾರಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 30 ಆಗಸ್ಟ್ 2018, 14:13 IST
Last Updated 30 ಆಗಸ್ಟ್ 2018, 14:13 IST

ಶಿರಸಿ: ಶಾಶ್ವತ ಸೇತುವೆಯಿಲ್ಲದೇ ಮಳೆಗಾಲದಲ್ಲಿ ತೀವ್ರ ತೊಂದರೆ ಅನುಭವಿಸುವ ತಾಲ್ಲೂಕಿನ ಕರೂರು, ಕುದ್ರಗೋಡ ಭಾಗಕ್ಕೆ ಗುರುವಾರ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಗ್ರಾಮಸ್ಥರಿಂದ ಮಾಹಿತಿ ಪಡೆದರು.

‘ಪ್ರಜಾವಾಣಿ’ಯಲ್ಲಿ ಆ.30ರಂದು ಪ್ರಕಟಗೊಂಡಿರುವ ‘ಸೇತುವೆಯೇ ಇಲ್ಲದ ಹಳ್ಳಿಗೆ ‘ಮಳೆ’ಯೇ ನಿಯಂತ್ರಕ’ ವರದಿಯ ಕುರಿತು ಜಿಲ್ಲಾಧಿಕಾರಿ ವಿವರ ಕೇಳಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಭೇಟಿ ನೀಡಿದ್ದರು. ‘ಕರೂರು ಮಜಿರೆಯಲ್ಲಿ ವಾಸಿಸುವವರಿಗೆ ಹೊರಜಗತ್ತಿಗೆ ಸಂಪರ್ಕ ಕಲ್ಪಿಸಲು ಭರತನಳ್ಳಿಗದ್ದೆ ಹೊಳೆಗೆ ಹಾಕಿರುವ ಕಾಲುಸಂಕವೇ ಆಧಾರವಾಗಿದೆ. ಹೊಳೆಯಲ್ಲಿ ನೀರು ಹೆಚ್ಚಾದರೆ ಅಡಿಕೆ ದಬ್ಬೆಯ ಈ ಕಾಲುಸಂಕ ನೀರಿನಲ್ಲಿ ಮುಳುಗುತ್ತದೆ. ಶಾಲೆಗೆ ಬರುವ ಮಕ್ಕಳು, ಜನರ ಓಡಾಟಕ್ಕೆ ತೊಂದರೆಯಾಗುತ್ತದೆ’ ಎಂದು ಗ್ರಾಮಸ್ಥರು ವಿವರಿಸಿದರು. ಸ್ಥಳೀಯರಾದ ರಾಮಾ ಗೌಡ, ಶೇಷಿ ಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT