ADVERTISEMENT

ಗ್ರಾಹಕರಿಗೆ ಕಣ್ಣೀರು ತರಿಸುವ ಈರುಳ್ಳಿ!

ತರಕಾರಿ ದರದಲ್ಲಿ ಏರುಪೇರು: ಮತ್ಸ್ಯಕ್ಷಾಮದಿಂದ ಮೀನುಗಳು ತುಟ್ಟಿ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2019, 12:14 IST
Last Updated 28 ನವೆಂಬರ್ 2019, 12:14 IST
ಈರುಳ್ಳಿ
ಈರುಳ್ಳಿ   

ಕಾರವಾರ: ಮಾರುಕಟ್ಟೆಯಲ್ಲಿ ಈರುಳ್ಳಿಯ ದರವು ದಾಖಲೆಯ ಏರಿಕೆಯಲ್ಲೇ ಮುಂದುವರಿದಿದೆ.ಮತ್ತೊಂದೆಡೆ ಮತ್ಸ್ಯಕ್ಷಾಮದಿಂದಾಗಿ ವ್ಯಾಪಾರಿಗಳೂಗ್ರಾಹಕರೂ ಚಿಂತೆಗೀಡಾಗಿದ್ದಾರೆ.

ಪ್ರಕೃತಿ ವಿಕೋಪವು ಈಬಾರಿ ತರಕಾರಿದರಗಳಲ್ಲಿ ವಿಪರೀತ ಏರುಪೇರಾಗುವಂತೆ ಮಾಡಿದೆ. ಪ್ರಮುಖವಾಗಿ ಈರುಳ್ಳಿಯು ಸಾಮಾನ್ಯ ಜನರಿಗೆ ಕೈಗೆಟುಕದಷ್ಟು ದುಬಾರಿಯಾಗುತ್ತಿದೆ. ಇದು ಹಿಂದಿನ ವಾರ ಪ್ರತಿ ಕೆ.ಜಿ.ಗೆ ₹ 80ರಲ್ಲಿ ಬಿಕರಿಯಾಗುತ್ತಿತ್ತು. ನಗರದಲ್ಲಿ ಭಾನುವಾರ ಸಂತೆಯಲ್ಲಿ ದಿಢೀರ್ ಏರಿಕೆಗೊಂಡು₹ 100ರಿಂದ ₹ 120ರ ದರವನ್ನು ಹೊಂದಿತ್ತು. ಸದ್ಯ ಗುಣಮಟ್ಟದ ಈರುಳ್ಳಿಯು ಪ್ರತಿ ಕೆ.ಜಿ.ಗೆ ₹ 120 ಹಾಗೂ ಕರ್ನಾಟಕದ ಈರುಳ್ಳಿ₹ 100ರಲ್ಲಿ ಮಾರಾಟವಾಗುತ್ತಿದೆ.

ಟೊಮೆಟೊ ದರದಲ್ಲಿ ಇಳಿಕೆ: ಎರಡು ವಾರದ ಹಿಂದೆ ಪ್ರತಿ ಕೆ.ಜಿ.ಗೆ ₹ 50ರಲ್ಲಿ ಬಿಕರಿಯಾಗುತ್ತಿದ್ದ ಟೊಮೆಟೊ, ದರದಲ್ಲಿ ಅರ್ಧದಷ್ಟು ಇಳಿಕೆ ಕಂಡಿರುವುದು ಗ್ರಾಹಕರಲ್ಲಿ ತುಸು ಸಮಾಧಾನ ತರುವ ವಿಚಾರವಾಗಿದೆ. ಹಿಂದಿನವಾರವೂ ಇಳಿಕೆ ಕಂಡು₹ 30ರ ದರವನ್ನು ಹೊಂದಿತ್ತು. ಸದ್ಯ ಪ್ರತಿ ಕೆ.ಜಿ.ಗೆ₹ 25ರಲ್ಲಿ ಮಾರಾಟವಾಗುತ್ತಿದೆ. ಮಾರುಕಟ್ಟೆಗೆ ಇದರ ಆವಕ ಹೆಚ್ಚಾಗಿರುವುದೇ ದರ ಇಳಿಕೆಗೆ ಕಾರಣ ಎಂಬುದು ತರಕಾರಿ ವ್ಯಾಪಾರಿಗಳ ಅನಿಸಿಕೆಯಾಗಿದೆ.

ADVERTISEMENT

ಪಾಂಫ್ರೆಟ್, ಕಿಂಗ್‌ಫಿಶ್ ತುಟ್ಟಿ: ಮೀನು ಮಾರುಕಟ್ಟೆಯಲ್ಲಿ ಕೆಲವು ಮೀನುಗಳು ಮಾತ್ರ ಕಾಣಸಿಗುತ್ತಿವೆ. ಅದರಲ್ಲೂ ಪಾಂಫ್ರೆಟ್ ಹಾಗೂ ಕಿಂಗ್‌ಫಿಶ್ ಆವಕಗೊಳ್ಳುತ್ತಿಲ್ಲ. ಹಾಗಾಗಿ ನಿರ್ದಿಷ್ಟ ಪ್ರದೇಶಗಳಲ್ಲಿ ಮಾತ್ರ ಇದು ದುಬಾರಿ ದರದಲ್ಲಿ ಮಾರಾಟವಾಗುತ್ತಿವೆ. ಹಿಂದಿನ ವಾರ ಒಂದು ಕೆ.ಜಿ.ಗೆ₹ 800ರ ದರವನ್ನು ಹೊಂದಿದ್ದ ಪಾಂಫ್ರೆಟ್ ಮೀನು, ಸದ್ಯ₹ 1,000ದಲ್ಲಿ ಗ್ರಾಹಕರ ಕೈಗೆ ಸಿಗುತ್ತಿದೆ. ಕೆ.ಜಿಗೆ₹ 1,200ರ ದರ ಹೊಂದಿದ್ದ ಕಿಂಗ್‌ಫಿಶ್, ಈಗ₹ 300ರಷ್ಟು ಏರಿಕೆ ಕಂಡು₹ 1,500ರಲ್ಲಿ ಮಾರಾಟವಾಗುತ್ತಿದೆ.

ಮೀನುಗಾರಿಕೆ ಸ್ಥಗಿತ:‘ಸಮುದ್ರದಲ್ಲಿ ಮೀನುಗಳೇ ಸಿಗುತ್ತಿಲ್ಲ..’ ಎನ್ನುವುದು ಮೀನುಗಾರರ ಅಳಲು. ‘ಹವಾಮಾನ ವೈಪರೀತ್ಯ, ಲೈಟ್‌ ಫಿಶಿಂಗ್ಹೀಗೆ ನಾನಾಕಾರಣಗಳಿಂದ ಮೀನಿಗೆ ಬರ ಎದುರಾಗಿದೆ. ಬಲೆಗಳಿಗೆ ಮೀನು ಬರುತ್ತಿಲ್ಲ. ಹಾಗಾಗಿ ಮೀನುಗಾರಿಕೆ ಸ್ಥಗಿತಗೊಂಡು ಹೆಚ್ಚಿನ ದೋಣಿಗಳು ಬಂದರಿನಲ್ಲಿ ಲಂಗರು ಹಾಕಿವೆ.ಹಾಗಾಗಿ ಸಂಗ್ರಹಿಸಿಟ್ಟ ಮೀನುಗಳನ್ನೇತಂದು ಮಾರುತ್ತಿದ್ದೇವೆ’ ಎನ್ನುತ್ತಾರೆ ಮೀನುವ್ಯಾಪಾರಿ ಸಂತೋಷ ತಳೇಕರ್.

‘ಮೀನುಗಾರಿಕೆ ಸ್ಥಗಿತಗೊಂಡಿರುವುದು ಮಾರುಕಟ್ಟೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.ಹೆಚ್ಚು ಬೇಡಿಕೆ ಹೊಂದಿದ್ದ ಕೆಲವು ಪ್ರಮುಖಮೀನುಗಳು ಆವಕಗೊಳ್ಳುತ್ತಿಲ್ಲ. ಇದುವ್ಯಾಪಾರಸ್ಥರ ಮೇಲೂ ಪರಿಣಾಮ ಬೀರುತ್ತದೆ’ ಎಂದುಬೇಸರ ವ್ಯಕ್ತಪಡಿಸುತ್ತಾರೆ.

---------

ಕಾರವಾರ ಮಾರುಕಟ್ಟೆ

ತರಕಾರಿ;ದರ (₹ಗಳಲ್ಲಿ)

ಆಲೂಗಡ್ಡೆ;30

ಟೊಮೆಟೊ;25

ಸೌತೆಕಾಯಿ;40

ತೊಂಡೆಕಾಯಿ;40

ಬೀನ್ಸ್;50

ಬೆಂಡೆಕಾಯಿ;40

ಕ್ಯಾರೆಟ್;80

ಬೀಟ್‌ರೂಟ್;60

ಕ್ಯಾಪ್ಸಿಕಂ;60

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.