ADVERTISEMENT

ಕಾರಿನ ಆಮಿಷವೊಡ್ಡಿ ಯುವತಿಗೆ ಹಣ ವಂಚನೆ

​ಪ್ರಜಾವಾಣಿ ವಾರ್ತೆ
Published 12 ಜನವರಿ 2020, 15:22 IST
Last Updated 12 ಜನವರಿ 2020, 15:22 IST

ಕಾರವಾರ:ಮೊಬೈಲ್‌ಗೆ ಬಂದ ಬಹುಮಾನ ಆಮಿಷದ ಕರೆಯನ್ನುನಂಬಿದ ನಗರದ ಯುವತಿಯೊಬ್ಬರು ₹ 34,900 ಕಳೆದುಕೊಂಡಿದ್ದಾರೆ.

ಕೋಡಿಬಾಗ ತಾಮ್ಸೆವಾಡಾದ ದಿವ್ಯಾ ಮೋಸ ಹೋದವರು. ಜ.4 ರಂದು ಅವರತಂಗಿಯ ಮೊಬೈಲ್‌ಗೆ85850 58727 ಸಂಖ್ಯೆಯಿಂದ ಕರೆ ಮಾಡಿದ ವ್ಯಕ್ತಿಯು, ತಾನು ಆನ್‌ಲೈನ್ ಬಟ್ಟೆ ಶಾಪಿಂಗ್ ವೆಬ್‌ಸೈಟ್ ‘ಕ್ಲಬ್ ಫ್ಯಾಕ್ಟರಿ’ಯ ಪರವಾಗಿ ಕರೆ ಮಾಡುತ್ತಿರುವುದಾಗಿ ತಿಳಿಸಿದ್ದ. ತಾವು ಬಹುಮಾನವಾಗಿ ಮಹೀಂದ್ರಾ ಕಾರನ್ನು ಗೆದ್ದಿದ್ದು, ಕಾರು ಬೇಡದಿದ್ದರೆ ಹಣ ಪಡೆಯಬಹುದು ಎಂದು ನಂಬಿಸಿದ್ದ.

ಬಹುಮಾನ ಪಡೆದುಕೊಳ್ಳಲು ₹ 3,500ನೊಂದಣಿ ಶುಲ್ಕ ಪಾವತಿಸಬೇಕು ಎಂದು ಹೇಳಿಎಸ್.ಬಿ.ಐ ಅಕೌಂಟ್ ನಂಬರ್ ತಿಳಿಸಿದ್ದ. ಅದನ್ನು ನಂಬಿದ ದಿವ್ಯಾ, ಹಣ ಜಮೆ ಮಾಡಿದ್ದರು. ಅದಾದ ಸ್ವಲ್ಪಹೊತ್ತಲ್ಲೇ ಮೊಬೈಲ್ ಸಂಖ್ಯೆ62904 17952ರಿಂದ ಇನ್ನೊಂದು ಕರೆ ಬಂತು. ಆ ವ್ಯಕ್ತಿಯು ತಾನು ಎಸ್.ಬಿ.ಐ ಬ್ಯಾಂಕ್ವ್ಯವಸ್ಥಾಪಕಎಂದು ಹೇಳಿದ್ದ.

ADVERTISEMENT

ತಮ್ಮ ಕೆನರಾ ಬ್ಯಾಂಕ್ ಅಕೌಂಟ್ ನಂಬರಿಗೆ ‘ಕ್ಲಬ್ ಫ್ಯಾಕ್ಟರಿ’ಯಲ್ಲಿ ಗೆದ್ದಿರುವ ₹ 12.60 ಲಕ್ಷವನ್ನುವರ್ಗಾಯಿಸಲಾಗುವುದು. ಅದಕ್ಕೂ ಮೊದಲು ಕ್ಲಬ್ ಫ್ಯಾಕ್ಟರಿಯವರ ಖಾತೆಗೆ ₹ 15,200ರು ಜಮೆಮಾಡಬೇಕು. ಆ ಹಣವು ಮರಳಿ ತಮ್ಮ ಖಾತೆಗೆ ಬರುತ್ತದೆ ಎಂದು ತಿಳಿಸಿದ್ದ.

ಗೂಗಲ್ ಪೇ ಮುಖಾಂತರ ಆ ಹಣವನ್ನೂ ಜಮೆ ಮಾಡಿದ್ದರು. ಮತ್ತೆ ಕರೆ ಮಾಡಿದ ವ್ಯಕ್ತಿಯುನಗರ ಶುಲ್ಕವೆಂದು ₹3,600 ಪಾವತಿಸಲು ಹೇಳಿದ್ದ. ಅದೂಜಮೆಯಾದ ಬಳಿಕ ಪುನಃ ₹12,600 ನಗರ ಶುಲ್ಕಪಾವತಿಗೆ ಹೇಳಿದ್ದ. ಈ ರೀತಿ ಒಟ್ಟು₹ 34,900ವಂಚಕರ ಖಾತೆಗೆ ಜಮೆ ಮಾಡಿದ್ದರು. ಅತ್ತ ಬಹುಮಾನವೂ ಇಲ್ಲದೇ ಹಣವೂ ಸಿಗದಾಗ ಮೋಸ ಹೋಗಿದ್ದು ಅರಿವಿಗೆ ಬಂತು.

ಈ ಸಂಬಂಧಸಿ.ಇ.ಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.