
ಪ್ರಜಾವಾಣಿ ವಾರ್ತೆ
ಹೊನ್ನಾವರ: ಪಟ್ಟಣದ ಮಾರ್ ಥೋಮಾ ಶಾಲೆಯ ಮೂರನೆ ತರಗತಿ ವಿದ್ಯಾರ್ಥಿನಿ ಮಾನ್ವಿ ನಾಯ್ಕ ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಈಚೆಗೆ ನಡೆದ ಇಂಡೋ-ಮಲೇಷ್ಯಾ ಅಂತರರಾಷ್ಟ್ರೀಯ ಯೋಗ ಚಾಂಪಿಯನ್‌ಶಿಪ್-2026 ಟ್ರೆಡಿಶನಲ್ ಹಾಗೂ ಆರ್ಟಿಸ್ಟಿಕ್ ಸೋಲೋ ವಿಭಾಗದಲ್ಲಿ ಎರಡು ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾಳೆ.
ಚೈತನ್ಯ ಯೋಗ ವಿಕಸನ ಕೇಂದ್ರದಲ್ಲಿ ರಾಜೇಶ್ವರಿ ಹೆಗಡೆ ಅವರಿಂದ ತರಬೇತಿ ಪಡೆದಿರುವ ಮಾನ್ವಿ,ಕುಮಟಾ ತಾಲ್ಲೂಕಿನ ಕೊಡಕಣಿ ಗ್ರಾಮದ ಕುಮಾರ ನಾಯ್ಕ ಹಾಗೂ ಸುವರ್ಣ ನಾಯ್ಕ ದಂಪತಿ ಪುತ್ರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.