ADVERTISEMENT

ಅಂಕೋಲಾ: ರಸ್ತೆ ಬದಿಯಲ್ಲಿ ಬಸ್ ಸಿಲುಕಿ ಪ್ರಯಾಣಿಕರ ಪರದಾಟ

​ಪ್ರಜಾವಾಣಿ ವಾರ್ತೆ
Published 5 ಜೂನ್ 2025, 13:29 IST
Last Updated 5 ಜೂನ್ 2025, 13:29 IST
ಅಂಕೋಲಾ ತಾಲ್ಲೂಕಿನ ಗೋಕರ್ಣ - ವಡ್ಡಿ - ಶಿರಸಿ ರಾಜ್ಯ ಹೆದ್ದಾರಿಯ ಕಾಚಿನಬಟ್ಟಿ ಮತ್ತು ಕುಂಟಗಣಿ ಮಧ್ಯಭಾಗದಲ್ಲಿ ಸಾರಿಗೆ ಬಸ್ ರಸ್ತೆಯ ಬದಿಯಲ್ಲಿ ಇಳಿಸಿದಾಗ ಮಣ್ಣಿನಲ್ಲಿ ಸಿಲುಕಿರುವುದು.
ಅಂಕೋಲಾ ತಾಲ್ಲೂಕಿನ ಗೋಕರ್ಣ - ವಡ್ಡಿ - ಶಿರಸಿ ರಾಜ್ಯ ಹೆದ್ದಾರಿಯ ಕಾಚಿನಬಟ್ಟಿ ಮತ್ತು ಕುಂಟಗಣಿ ಮಧ್ಯಭಾಗದಲ್ಲಿ ಸಾರಿಗೆ ಬಸ್ ರಸ್ತೆಯ ಬದಿಯಲ್ಲಿ ಇಳಿಸಿದಾಗ ಮಣ್ಣಿನಲ್ಲಿ ಸಿಲುಕಿರುವುದು.   

ಅಂಕೋಲಾ: ತಾಲ್ಲೂಕಿನ ಗೋಕರ್ಣ- ವಡ್ಡಿ- ಶಿರಸಿ ರಾಜ್ಯ ಹೆದ್ದಾರಿಯ ಕಾಚಿನಬಟ್ಟಿ ಮತ್ತು ಕುಂಟಗಣಿ ಮಧ್ಯಭಾಗದಲ್ಲಿ ಶಿರಸಿ ವಿಭಾಗದ ವಾಸ್ಕೊ-ಹಾನಗಲ್ ಸಾರಿಗೆ ಬಸ್ ರಸ್ತೆಯ ಬದಿಯಲ್ಲಿ ಇಳಿಸಿದಾಗ ಮಣ್ಣಿನಲ್ಲಿ ಸಿಲುಕಿ ಪ್ರಯಾಣಿಕರು ಎರಡು ಗಂಟೆಗಳ ಕಾಲ ಪರದಾಡುವಂತಾಯಿತು.

ನಂತರ ಸ್ಥಳೀಯರ ಸಹಾಯ ಹಾಗೂ ಜೆಸಿಬಿ ಮೂಲಕ ಬಸ್‌ಅ ನ್ನು ತೆರವು ಮಾಡಿ ನಂತರ ರಸ್ತೆ ಸಂಚಾರಕ್ಕೆ ಅನುಕೂಲ ಮಾಡಲಾಯಿತು. ಕಳೆದೆರಡು ತಿಂಗಳ ಹಿಂದಷ್ಟೇ ಹೊಸದಾಗಿ ರಸ್ತೆ ಮಾಡಲಾಗಿದೆ. ಆದರೆ, ರಸ್ತೆ ಬದಿಯ ಶೋಲ್ಡರ್‌ನಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಮಣ್ಣನ್ನು ಹಾಕಿರುವುದರಿಂದ ರಸ್ತೆ ಬಿಟ್ಟು ಕೆಳಗೆ ವಾಹನ ಇಳಿಸಿದಾಗ ಪದೇ ಪದೇ ಅಪಘಾತವಾಗುತ್ತಿದ್ದೆ. ಆದ್ದರಿಂದ ಇದ್ದಕ್ಕೆ ಸಂಬಂಧಿಸಿದ ಇಲಾಖೆ ಹಾಗೂ ರಸ್ತೆ ಕಾಮಗಾರಿಯನ್ನು ಗುತ್ತಿಗೆ ಪಡೆದವರು ತಕ್ಷಣವೇ ಬಾಕಿ ಉಳಿದಿರುವ ಕಾಮಗಾರಿಯನ್ನು ಸರಿಪಡಿಸಬೇಕು ಮತ್ತು ಗುಣಮಟ್ಟದ ಮಣ್ಣನ್ನು ಹಾಕಿಸಬೇಕು. ಇಲ್ಲದಿದ್ದರೆ ಮುಂದೆ ಆಗುವ ಅನಾಹುತಗಳಿಗೆ ಇಲಾಖೆ ಹಾಗೂ ಗುತ್ತಿಗೆದಾರರೇ ಜವಾಬ್ದಾರಿ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಅಚವೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಾಲಚಂದ್ರ ಶೆಟ್ಟಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಜಿ.ಎಂ.ಶೆಟ್ಟಿ, ರಾಮದಾಸ ನಾಯಕ, ಗಣೇಶ್ ಕಂಡಿಗದ್ದೆ, ದರ್ಶನ್ ಗೌಡ, ನಾಗರಾಜ್ ಪಟಗಾರ, ಗಗನ ನಾಯಕ, ಗಣೇಶ್ ಗೌಡ ಸ್ಥಳದಲ್ಲಿದ್ದು ಸಹಕರಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.