
ಕಾರವಾರ: ಇಲ್ಲಿನ ಬಾಡದಲ್ಲಿರುವ ಶಿವಾಜಿ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಸೋಮವಾರ ನಡೆದ ಪದವಿ ಪೂರ್ವ ಕಾಲೇಜುಗಳ ರಾಜ್ಯಮಟ್ಟದ ಥ್ರೋಬಾಲ್ ಪಂದ್ಯಾವಳಿಯಲ್ಲಿ ಬಾಲಕರ ವಿಭಾಗದಲ್ಲಿ ಮೈಸೂರು ತಂಡ ಮತ್ತು ಬಾಲಕಿಯರ ವಿಭಾಗದಲ್ಲಿ ದಕ್ಷಿಣ ಕನ್ನಡ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದವು.
ಬಾಲಕರ ವಿಭಾಗದಲ್ಲಿ ದಕ್ಷಿಣ ಕನ್ನಡವನ್ನು 24–26, 25–23, 15–12 (2–1) ಸೆಟ್‌ಗಳಿಂದ ಮಣಿಸಿದ ಮೈಸೂರು ವಿಜಯದ ಮಾಲೆ ಧರಿಸಿತು. ಬಾಲಕಿಯರ ವಿಭಾಗದಲ್ಲಿ ಮೈಸೂರು ತಂಡವನ್ನು ಸಮರ್ಥವಾಗಿ ಎದುರಿಸಿದ ದಕ್ಷಿಣ ಕನ್ನಡ ತಂಡವು 25–21, 15–25, 15–13 (2–1) ಚಾಂಪಿಯನ್ ಪಟ್ಟ ಅಲಂಕರಿಸಿತು. ಎರಡು ದಿನ ನಡೆದ ಪಂದ್ಯಾವಳಿಯಲ್ಲಿ 33 ಶೈಕ್ಷಣಿಕ ಜಿಲ್ಲೆಗಳ 64 ತಂಡಗಳು ಪಾಲ್ಗೊಂಡಿದ್ದವು.