ಸಿದ್ದಾಪುರ ಸಮೀಪದ ಕರಡಿಗೋಡುವಿನಲ್ಲಿ ಇನ್ನೂ ಕಾವೇರಿ ನದಿ ನೀರಿನ ಪ್ರವಾಹ ಇಳಿಕೆಯಾಗದಿರುವುದು ಶನಿವಾರ ಕಂಡು ಬಂತು ( ಸಂಗ್ರಹ ಚಿತ್ರ)
ಸಿದ್ದಾಪುರ: ತಾಲ್ಲೂಕಿನಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದು ನಾಗರಬಾವಿ ಗ್ರಾಮದ ನಿವಾಸಿ ಇಬ್ರಾಹಿಂ ಪೀರ್ ಸಾಬ್ ಎಂಬುವವರ ಕಚ್ಚಾ ಮನೆ ಶಿಥಿಲಾವಸ್ಥೆಯಲ್ಲಿದ್ದ ಕಾರಣ ಸೋಮವಾರ ಸುರಿದ ಮಳೆಯಿಂದಾಗಿ ಸಂಪೂರ್ಣ ಹಾನಿಯಾಗಿದೆ.
ನಿವಾಸಿಗಳು ಪಕ್ಕದಲ್ಲಿ ಮನೆ ನಿರ್ಮಿಸಿಕೊಂಡು 8 ದಿನಗಳ ಮೊದಲು ಸ್ಥಳಾಂತರಗೊಂಡಿದ್ದರು. ಅಂದಾಜು ₹ 50 ಸಾವಿರದಷ್ಟು ಹಾನಿಯಾಗಿದೆ ಎಂದು ಪ್ರಾಥಮಿಕ ವರದಿಯಲ್ಲಿ ತಿಳಿಸಿದ್ದಾರೆ.
ತಾಲ್ಲೂಕಿನ ಉಂಚಳ್ಳಿ ಗ್ರಾಮದ ನಿವಾಸಿಯಾದ ಸವಿತಾ ನಾಗೂ ಮುಕ್ರಿ ಎಂಬುವವರ ಮನೆಯ ಗೋಡೆ ಕುಸಿದು ಸಂಪೂರ್ಣ ಹಾನಿಗೊಳಗಾಗುವ ಸ್ಥಿತಿಯಲ್ಲಿದೆ. ಕಾರಣ ಮನೆಯ ಜನರಿಗೆ ಸಂಬಂಧಿಕರ ಮನೆಗೆ ತೆರಳಲು ಸೂಚಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.