ಪರೀಕ್ಷೆ–ಪ್ರಾತಿನಿಧಿಕ ಚಿತ್ರ
ಯಲ್ಲಾಪುರ: ವಿಶ್ವದರ್ಶನ ಸೇವಾ ಹಾಗೂ ಓಂಕಾರ ಯೋಗ ಕೇಂದ್ರ ಸಂಯುಕ್ತವಾಗಿ ಭಾರತೀಯ ಸಂಸ್ಕೃತಿ ಮೌಲ್ಯ ಸಂಸ್ಕಾರ ಪರಿಚಯಿಸುವ ದೃಷ್ಟಿಯಿಂದ ರಾಮಾಯಣ ಹಾಗು ಮಹಾಭಾರತ ಕಥೆಯನ್ನಾಧರಿಸಿದ ಪರೀಕ್ಷೆಯನ್ನು ನಡೆಸಲಿವೆ.
ಪರೀಕ್ಷೆಗಳು ಪ್ರಾಥಮಿಕ ಮತ್ತು ಪ್ರೌಢ ವಿಭಾಗದಲ್ಲಿ ಜೂನ್ 28ರಂದು ಮಧ್ಯಾಹ್ನ 2.30 ರಿಂದ ವಿಶ್ವ ದರ್ಶನ ಆವರಣದಲ್ಲಿ ನಡೆಯಲಿದ್ದು ಆಸಕ್ತರು ಅಜಯ ಭಾರತೀಯ 8904134073, ಶ್ರೀರಾಮ ಲಾಲಗುಳಿ 9483213106 ಅವರಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.